ಕಿತ್ತಳೆ ಸಿಪ್ಪೆಯನ್ನು ಈ ರೀತಿ ಬಳಸಿದ ತಕ್ಷಣ ಕಪ್ಪು ಬಣ್ಣಕ್ಕೆ ಮರಳುವುದು ಬಿಳಿ ಕೂದಲು !
ಬಿಳಿಕೂದಲಿನ ಸಮಸ್ಯೆಗೆ ಕೆಮಿಕಲ್ ಗಳ ಪರಿಹಾರಕ್ಕಿಂತ ನೈಸರ್ಗಿಕ ಉಪಾಯಗಳನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಇದರಿಂದ ಕೂದಲು ಹಾಳಾಗುವುದಿಲ್ಲ.
ಕಿತ್ತಳೆ ಸಿಪ್ಪೆ ಬಿಳಿ ಕೂದಲಿನ ಸಮಸ್ಯೆಯನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ. ಕಿತ್ತಳೆ ಸಿಪ್ಪೆಯನ್ನು ಬಿಳಿ ಕೂದಲಿಗೆ ಬಳಸುವ ಮೂಲಕ ಕೂದಲನ್ನು ಮತ್ತೆ ಕಡು ಕಪ್ಪು ಬಣ್ಣಕ್ಕೆ ತಿರುಗಿಸಬಹುದು.
ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿ ಇದು ಕೂದಲಿಗೆ ರೇಷ್ಮೆಯಂತಹ ಹೊಳಪು ನೀಡುತ್ತದೆ. ಕೂದಲಿಗೆ ಶಾಂಪೂ ಬಳಸುವ ಅಗತ್ಯವೂ ಇರುವುದಿಲ್ಲ.
ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ.ಈಗ ಅದಕ್ಕೆ ಒಂದು ಅಥವಾ ಎರಡು ಚಮಚ ತೆಂಗಿನೆಣ್ಣೆ, ಅಲೋವೆರಾ ಜೆಲ್ ಮತ್ತು ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿ 30 ನಿಮಿಷಗಳವರೆಗೆ ಹಾಗೆಯೇ ಬಿಡಿ.
ಇನ್ನು ಕಿತ್ತಳೆ ಸಿಪ್ಪೆಯ ಪುಡಿಗೆ ಜೇನುತುಪ್ಪವನ್ನು ಬೆರೆಸಿ, ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ.ಸುಮಾರು 30 ನಿಮಿಷಗಳ ನಂತರ ನೀರಿನಿಂದ ಕೂದಲನ್ನು ತೊಳೆಯಿರಿ.
ಮೇಲೆ ಹೇಳಿದ ರೀತಿಯಲ್ಲಿ ಕೂದಲಿಗೆ ಕಿತ್ತಲೆ ಸಿಪ್ಪೆಯನ್ನು ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಮಾತ್ರವಲ್ಲ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)