ಬೇರಿನಿಂದಲೇ ದಷ್ಟಪುಷ್ಟ ಕಡುಕಪ್ಪಾದ ಕೂದಲು ಬೆಳೆಯಲು ಹುಣಸೆ ರಸವನ್ನು ಈ ರೀತಿ ಬಳಸಿ! ತಿಂಗಳುಗಟ್ಟಲೆ ಕಪ್ಪಾಗಿಯೇ ಇರುತ್ತದೆ
ವಯಸ್ಸಾದ ನಂತರ ಕೂದಲು ಉದುರುವುದು, ಒಡೆಯುವುದು ಮತ್ತು ಬಿಳಿಯಾಗುವುದು ಸಾಮಾನ್ಯ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಚಿಕ್ಕ ಮಕ್ಕಳಲ್ಲೂ ಕಂಡು ಬರುತ್ತಿದೆ. ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳು ಮತ್ತು ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುತ್ತದೆ.
ರಾಸಾಯನಿಕ ಕೂದಲಿನ ಬಣ್ಣಗಳನ್ನು ಬಳಸುವುದರಿಂದ ಕೂದಲನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೆ ನೈಸರ್ಗಿಕ ಅಂಶಗಳನ್ನು ಬಳಸಿಕೊಂಡು ಕೂದಲನ್ನು ಕಪ್ಪಾಗಿಸಬಹುದು. ಕೂದಲನ್ನು ಕಪ್ಪಾಗಿಸಲು ನೀವು ಹುಣಸೆ ಎಲೆ ಅಥವಾ ಹುಣಸೆಯನ್ನು ಬಳಸಬಹುದು.
ಕೂದಲನ್ನು ಕಪ್ಪಾಗಿಸಲು, ಹುಣಸೆ ಹೇರ್ ಮಾಸ್ಕ್ ಅಥವಾ ಹೇರ್ ಪ್ಯಾಕ್ ಅನ್ನು ತಯಾರಿಸಬಹುದು. ಕೂದಲು ಕಪ್ಪಾಗಲು ಹುಣಸೆ ಹೇರ್ ಮಾಸ್ಕ್ ಮಾಡುವುದು ಹೇಗೆ ಮತ್ತು ಅದನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಒಂದು ಬಟ್ಟಲು ಹುಣಸೆ ತೊಳೆದು ರುಬ್ಬಿಕೊಳ್ಳಿ. ಇದಕ್ಕೆ ಅರ್ಧ ಬೌಲ್ ಮೊಸರನ್ನು ಮಿಶ್ರಣ ಮಾಡಿ. ಅದರಲ್ಲಿ 2 ವಿಟಮಿನ್-ಇ ಕ್ಯಾಪ್ಸುಲ್ʼಗಳ ಜೆಲ್ ಸೇರಿಸಿ. ಈಗ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. 15 ರಿಂದ 20 ನಿಮಿಷ ನಂತರ, ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ಹೇರ್ ಮಾಸ್ಕ್ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುತ್ತದೆ.
ವಿಟಮಿನ್ ಸಿ ಹುಣಸೆಯಲ್ಲಿ ಕಂಡುಬರುತ್ತದೆ. ಇದು ಕೂದಲಿಗೆ ನೈಸರ್ಗಿಕ ಕೂದಲು ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ. ವಾರದಲ್ಲಿ ಎರಡು ಬಾರಿ ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.
ಇನ್ನು ಹುಣಸೆ ಎಲೆಗಳಲ್ಲಿರುವ ಪೋಷಕಾಂಶಗಳು ಕೂದಲನ್ನು ನೈಸರ್ಗಿಕವಾಗಿ ಸ್ಮೂತ್ ಮಾಡುವ ಕೆಲಸ ಮಾಡುತ್ತದೆ. ಹುಣಸೆ ಎಲೆಗಳನ್ನು ಅಕ್ಕಿ ನೀರಿನೊಂದಿಗೆ ವಾರಕ್ಕೊಮ್ಮೆ ಬಳಸಿದರೆ, ಅದು ಕೂದಲನ್ನು ಕ್ರಮೇಣ ನೇರಗೊಳಿಸಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.