COVID 19 ವಾಕ್ಸಿನೇಷನ್ slot ನೊಟಿಫಿಕೇಶನ್ ಗಾಗಿ ಈ ಆಪ್ ಗಳನ್ನು ಬಳಸಿ
COVID-19 ವ್ಯಾಕ್ಸಿನೇಷನ್ ಗಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಮತ್ತು ಸ್ಲಾಟ್ ಗಳನ್ನು ಕಾಯ್ದಿರಿಸುವ ಸಲುವಾಗಿ, ಭಾರತ ಸರ್ಕಾರವು ಈ ಆಪ್ ಅನ್ನು ಬಿಡುಗಡೆ ಮಾಡಿತು. ಈ ಅಪ್ಲಿಕೇಶನ್ ಮೂಲಕ COVID-19 ವ್ಯಾಕ್ಸಿನೇಷನ್ಗಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಸ್ಲಾಟ್ ಅನ್ನು ನಿಗದಿಪಡಿಸಬಹುದು. ಕೋವಿನ್ ಆಪ್ ವ್ಯಾಕ್ಸಿನೇಷನ್ ವೇಳಾಪಟ್ಟಿಯನ್ನು ಸಹ ಟ್ರ್ಯಾಕ್ ಮಾಡುತ್ತದೆ. ಅಲ್ಲದೆ, ವಾಕ್ಸಿನೇಷನ್ ನಂತರ ವಾಕ್ಸಿನೇಷನ್ ಸರ್ಟಿಫಿಕೇಟ್ ಗಳನ್ನು ಕೂಡಾ ಿದರಿಂದ ಡವನ್ ಲೋಡ್ ಮಾಡಿಕೊಳ್ಳಬಹುದು
ಇದು ಕಾಂಟ್ಯಾಕ್ಟ್ ಟ್ರೇಸ್ ಮಾಡುವ ಆ್ಯಪ್. ಇದು ಯೂಸರ್ ಸೇಫ್ ಇದ್ದಾರೋ ಇಲ್ಲವೋ ಎಂಬುದನ್ನು ತಿಳಿಸುತ್ತದೆ. ಜೊತೆಗೆ ಸೋಂಕು ವ್ಯಾಪಕವಾಗಿರುವ ವಲಯಗಳ ಬಗ್ಗೆಯೂ ಮಾಹಿತಿ ನೀಡುತ್ತದೆ. ಮಹಾಮಾರಿ ಕುರಿತ ಲೇಟೆಸ್ಟ್ ಮಾಹಿತಿ ಕೂಡಾ ಇದರಲ್ಲಿ ಲಭ್ಯವಿರುತ್ತದೆ. ವ್ಯಾಕ್ಸಿನ್ ಸೇರಿದಂತೆ ಮಹಾಮಾರಿ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಮಾಹಿತಿ ಇದರಲ್ಲಿರುತ್ತದೆ. ಮುಖ್ಯವಾಗಿ ಈ ಆ್ಯಪ್ ನಲ್ಲಿ ಕರೋನಾ ಸಹಾಯವಾಣಿಗಾಗಿ ಕ್ವಿಕ್ ಡಯಲ್ ಬಟನ್ ಇದೆ. ಇದರ ಜೊತೆಗೊಂದಿಷ್ಟು ಉಪಯುಕ್ತ ಪೀಚರ್ಸ್ ಕೂಡಾ ಇವೆ.
ವಿಶೇಷವಾಗಿ ರಾಜ್ಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಟ್ವಿಟರ್ ನೀಡುತ್ತದೆ. ಮಹಾಮಾರಿ ಕುರಿತ ಸುಳ್ಳು ಸುದ್ದಿಗಳ ಮಾಹಿತಿ ನೀಡುತ್ತದೆ. ಜೊತೆಗೆ ಸಾಧ್ಯವಾದಷ್ಟೂ ನಿಖರ ಮಾಹಿತಿಗಳನ್ನು ಬಳಕೆದಾರರಿಗೆ ನೀಡುತ್ತದೆ. ಕರೋನಾ ಚಿಕಿತ್ಸೆಗೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢಿಕರಿಸಲು ಕೂಡಾ ಇದು ನೆರವಾಗುತ್ತದೆ.
ವ್ಯಾಕ್ಸಿನ್ ಗಾಗಿ ಸ್ಲಾಟ್ ಬುಕ್ ಮಾಡುವುದು ಇದೀಗ ಕಠಿಣದ ಕೆಲಸ. ಕಣ್ಣು ಮುಚ್ಚಿ ತೆರೆಯುವುದರಲ್ಲಿ ವ್ಯಾಕ್ಸಿನ್ ಸ್ಲಾಟ್ ಮುಗಿದು ಹೋಗಿರುತ್ತದೆ. ಆದರೆ, ಪೇಟಿಎಂ ಒಂದು ಫೀಚರ್ ಡವಲಪ್ ಮಾಡಿದೆ. ನಿಯಮಿತ ಅವಧಿಯಲ್ಲಿ ಪೇಟಿಎಂ ಕೊವಿನ್ ಪೋರ್ಟಲ್ ನ್ನು ಪಿಂಗ್ ಮಾಡುತ್ತಿರುತ್ತದೆ. ಲಭ್ಯ ಇರುವ ವ್ಯಾಕ್ಸಿನ್ ಸ್ಲಾಟ್ ಗಳನ್ನು ಸೀಮಿತ ಅವಧಿಯಲ್ಲಿ ನೊಟಿಫೈ ಮಾಡುತ್ತಲೇ ಇರುತ್ತದೆ.
ಪಬ್ಲಿಕ್ ಆ್ಯಪನ್ನು ಸಾಮಾನ್ಯವಾಗಿ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಆರೋಗ್ಯ ವೃತಿಪರರು ಇತ್ಯಾದಿ ವೃತ್ತಿ ನಿರತರು ಬಳಸುತ್ತಾರೆ. ಇದು ಕರೋನಾಗೆ ಸಂಬಂಧಿಸಿದ ಅಧಿಕೃತ ಮಾಹಿತಿ ನೀಡುತ್ತದೆ. ಕೊವಿಡ್ ಕೇರ್ ಸೆಂಟರ್, ಆಸ್ಪತ್ರೆ, ವ್ಯಾಕ್ಸಿನೇಶನ್, ಮೆಡಿಕಲ್ ಸಪ್ಲೈ, ಲಾಕ್ ಡೌನ್ ನಿಯಮ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಮಾಹಿತಿ ನೀಡುತ್ತದೆ.