ಈ ವಸ್ತುಗಳನ್ನು ಬಳಸಿ ನೋಡಿ ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಇರುವುದಿಲ್ಲ
ಬಿಳಿಯಾದ ಕೂದಲನ್ನು ಕರಿಬೇವು ಕಪ್ಪು ಮಾಡಲು ಸಹಾಯ ಮಾಡುತ್ತದೆ, ಮಾತ್ರವಲ್ಲ ಮತ್ತೆ ಕೂದಲು ಬೆಳ್ಳಗಾಗದಂತೆ ತಡೆಯುತ್ತದೆ.
.ಕರಿಬೇವನ್ನು ತೆಂಗಿನೆಣ್ಣೆ ಅಥವಾ ಜೋಜೋಬಾ ಆಯಿಲ್ ನಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆ ತಣ್ಣಗಾದ ಬಳಿಕ ಕೂದಲಿಗೆ ಹಚ್ಚಿ.
ಆಂಟಿ ಆಕ್ಸಿಡೆಂಟ್ ನಲ್ಲಿ ಸಮೃದ್ದವಾಗಿರುವ ನೆಲ್ಲಿಕಾಯಿ ಕೂಡಾ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯಕ.
ನೆಲ್ಲಿ ಕಾಯಿ ರಸ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಬಹುದು. ಅಥವಾ ನೆಲ್ಲಿ ಕಾಯಿ ರಸವನ್ನು ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ನಲ್ಲಿ ಬೆರೆಸಿ ಕೂಡಾ ಹಚ್ಚಬಹುದು.
ಬ್ಲಾಕ್ ಟೀಯಲ್ಲಿ ಟ್ಯಾನಿಕ್ ಆಸಿಡ್ ಇರುತ್ತದೆ. ಇದು ಕೂದಲನ್ನು ಕಪ್ಪಾಗಿಸಲು ಮತ್ತು ಹೊಳಪು ನೀಡಲು ಸಹಾಯ ಮಾಡುತ್ತದೆ. ಬ್ಲಾಕ್ ಟೀ ಬಿಳಿ ಕೂದಲಿನಿಂದ ಸಂಪೂರ್ಣ ಮುಕ್ತಿ ನೀಡುತ್ತದೆ.
ಸಕ್ಕರೆ ಹಾಕದೆ ಬ್ಲಾಕ್ ಟೀ ತಯಾರಿಸಿಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಈ ಬ್ಲಾಕ್ ಟೀಯನ್ನು ಕೂದಲಿಗೆ ಹಚ್ಚಿ.
ಭೃಂಗರಾಜ್ ಕೂದಲು ಉದುರುವುದನ್ನು ತಡೆಯುತ್ತದೆ. ಬಿಳಿ ಕೂದಲಿನ ಸಮಸ್ಯೆ ಮತ್ತು ತಲೆನೋವಿನ ಸಮಸ್ಯೆಗೆ ಕೂಡಾ ಇದು ಪರಿಹಾರ ನೀಡುತ್ತದೆ.
ಭೃಂಗರಾಜ್ ಎಣ್ಣೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಇದನ್ನು ಮನೆಯಲ್ಲಿ ತಯಾರಿಸಿಬೇಕಾದರೆ ಭೃಂಗರಾಜ ಎಲೆಗಳನ್ನುತೆಗೆದುಕೊಂಡು ಪೌಡರ್ ಮಾಡಿಕೊಳ್ಳಿ. ಈ ಪೌಡರ್ ಅನ್ನು ತೆಂಗಿನೆಣ್ಣೆಯಲ್ಲಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಲು ಮರೆಯದಿರಿ. Zee Media ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ