ನಿಮ್ಮ ಲ್ಯಾಪ್ ಟಾಪ್, ಕಂಪ್ಯೂಟರ್ hang ಆಗದಂತೆ ಈ ರೀತಿ ಇಟ್ಟುಕೊಳ್ಳಿ
ನಿಮ್ಮ ಕಂಪ್ಯೂಟರ್ ಸಾಕಷ್ಟು ಹಳೆಯದಾಗಿದ್ದರೆ, ಅದರ ವೇಗವನ್ನು ಹೆಚ್ಚಿಸಲು ಹಾರ್ಡ್ ವೇರ್ ಅನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕಾಗಿ, ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನ RAM ಅನ್ನು ಕೂಡಾ ಹೆಚ್ಚಿಸಬೇಕಾಗಬಹುದು. ಇದಲ್ಲದೆ, ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಮ್ ಅನ್ನು ಕೂಡಾ ಪರಿಶೀಲಿಸಬೇಕಾಗುತ್ತದೆ.
ಎಷ್ಟೋ ಸಲ ಸಮಯ ಉಳಿಸುವ ಸಲುವಾಗಿ ಅಥವಾ, ಫೈಲ್ ಗಳನ್ನು ಮತ್ತೆ ಓಪನ್ ಮಾಡಬೇಕಾಗುತ್ತದೆ ಎಂಬ ಸೋಮಾರಿತನದಿಂದಾಗಿ ಸಿಸ್ಟಮ್ ಅನ್ನು ರಿಸ್ಟಾರ್ಟ್ ಮಾಡುವುದೇ ಇಲ್ಲ. ಹೀಗೆ ಮಾಡಿದರೆ ಸಿಸ್ಟಮ್ ನ ಸ್ಪೀಡ್ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಅನ್ನು ರೀಸ್ಟಾರ್ಟ್ ಮಾಡುತ್ತಿರಿ.
ಆಪರೇಟಿಂಗ್ ಸಿಸ್ಟಮ್ ಅನ್ನುupdate ಮಾಡುವ ಮೆಸೇಜ್ ಅಥವಾ ನೊಟಿಫಿಕೇಶನ್ ಅನ್ನು ನಿರ್ಲಕ್ಷಿಸಬೆಡಿ. ಸಮಯಕ್ಕೆ ಸರಿಯಾಗಿ ಸಿಸ್ಟಮ್ update ಆಗುತ್ತಿರಲಿ.
ನಾವು ಬಳಸದೇ ಇರುವ ಕೆಲ ಸಾಫ್ಟ್ ವೇರ್ ಗಳನ್ನು ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಇಟ್ಟುಕೊಂಡಿರುತ್ತೇವೆ. ಯಾವ ಸಾಫ್ಟ್ ವೇರ್ ಅನ್ನು ನಾವು ಬಳಸುವುದಿಲ್ಲವೋ ಅದನ್ನು ಸಿಸ್ಟಮ್ ನಿಂದ ಡಿಲೀಟ್ ಮಾಡಿಕೊಳ್ಳಿ.
ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸ್ಟಾರ್ಟ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ. ಇದರ ನಂತರ, ರನ್ ಆಯ್ಕೆಮಾಡಿ. ಸರ್ಚ್ ಬಾಕ್ಸ್ ತೆರೆಯುತ್ತದೆ. ಇದನ್ನು% temp% ಮಾಡಿಕೊಳ್ಳಿ. ಈಗ ಕೆಲವು ಫೈಲ್‌ಗಳು ತೆರೆದುಕೊಳ್ಳುತ್ತವೆ. ಇಲ್ಲಿ ಉಪಯೋಗವಿಲ್ಲದ ಫೈಲ್ ಗಳನ್ನು ಸೆಲೆಕ್ಟ್ ಮಾಡಿ ಡಿಲೀಟ್ ಮಾಡಿ. ಸಾಧ್ಯವಾದರೆ ಎಲ್ಲಾ ಫೈಲ್ ಗಳನ್ನು ಡಿಲೀಟ್ ಮಾಡಬಹುದು.