ಹಲ್ಲಿ ಕಾಟದಿಂದ ಮುಕ್ತಿ ಪಡೆಯಲು ಈ ಐದು ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಿ
ಹಲ್ಲಿಗಳು ಮೊಟ್ಟೆಯ ಸಿಪ್ಪೆಯ ವಾಸನೆಯನ್ನು ಇಷ್ಟಪಡುವುದಿಲ್ಲ. ಅದ್ದರಿಂದ ಮನೆಯ ಮೂಲೆ ಮೂಲೆಗಳಲ್ಲಿ ಮೊಟ್ಟೆಯ ಸಿಪ್ಪೆಗಳನ್ನು ಇಡಿ. ಇದನ್ನು ಪ್ರತಿ ವಾರ ಬದಲಾಯಿಸಿ.
ಮನೆಯ ಮೂಲೆಗಳಲ್ಲಿ ಪೆಪ್ಪರ್ ಸ್ಪ್ರೇ ಸಿಂಪಡಿಸಿದರೆ, ಹಲ್ಲಿಗಳು ಮತ್ತೆ ನಿಮ್ಮ ಮನೆಯಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಪೆಪ್ಪರ್ ಹಲ್ಲಿಯ ಚರ್ಮದಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ.
ಹಲ್ಲಿಗಳು ಸಾಮಾನ್ಯವಾಗಿ ಸಿಂಕ್ ಅಡಿಯ ಕ್ಯಾಬಿನೆಟ್ ನಲ್ಲಿ ಮನೆ ಮಾಡಿಕೊಂಡಿರುತ್ತದೆ. ಆದ್ದರಿಂದ ಪ್ರತಿ ವಾರಾಂತ್ಯದಲ್ಲಿ ಈ ಸ್ಥಳವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ.
ನಾಫ್ತಲೀನ್ ಗೋಲಿಗಳನ್ನು ಹಲ್ಲಿಗಳ ಶತ್ರು ಎಂದೇ ಕರೆಯಲಾಗುತ್ತದೆ. ಹಲ್ಲಿಗಳು ಈ ಗೋಲಿಗಳ ಹತ್ತಿರವೂ ಸುಳಿಯುವುದಿಲ್ಲ. ಅಲ್ಲದೆ ಈ ಗೋಲಿಗಳು ಅನೇಕ ಕೀಟಗಳು ಜೇಡಗಳು ಕೂಡಾ ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ಹಲ್ಲಿಗಳು ಇಷ್ಟಪಡುವುದಿಲ್ಲ. ಆದ್ದರಿಂದ ಅದನ್ನು ಅಡಿಗೆ ಮತ್ತು ಸ್ನಾನಗೃಹದ ಮೂಲೆಗಳಲ್ಲಿ ಮತ್ತು ಕಿಟಕಿಗಳಲ್ಲಿ ಇರಿಸಿದರೆ, ಹಳ್ಳಿ ಮನೆ ಒಳಗೆ ಬರುವುದಿಲ್ಲ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)