ಬಿಳಿ ಕೂದಲನ್ನು ನೈಸರ್ಗಿಕವಾಗಿ ಚಿಟಿಕೆಯಲ್ಲಿ ಕಪ್ಪಾಗಿಸುತ್ತೆ ಈ ಒಂದು ತರಕಾರಿ..!
ಬೂದು ಕೂದಲು ಅಥವಾ ಬಿಳಿ ಕೂದಲಿನ ಸಮಸ್ಯೆ ಅತಿ ಚಿಕ್ಕ ವಯಸ್ಸಿನಲ್ಲಿ ಬಹುತೇಕ ಜನರನ್ನು ಬಾಧಿಸುವ ಸಾಮಾನ್ಯ ಸಮಸ್ಯೆ ಆಗಿದೆ. ಆದರೆ, ಇದಕ್ಕೆ ಒಂದೇ ಒಂದು ತರಕಾರಿಯಿಂದ ಪರಿಹಾರ ಪಡೆಯಬಹುದು.
ಬೀಟ್ರೂಟ್ ಬಳಕೆಯಿಂದ ಬಿಳಿ ಕೂದಲನ್ನು ಚಿಟಿಕೆಯಲ್ಲಿ ಗಾಢ ಕಪ್ಪಾಗಿಸಬಹುದು.
ಬೀಟ್ರೂಟ್ ನಲ್ಲಿರುವ ಪೋಷಕಾಂಶಗಳು ಕೂದಲನ್ನು ಹೈಡ್ರೇಟ್ ಮಾಡುವುದರ ಜೊತೆಗೆ ರಕ್ತಪರಿಚಲನೆಯನ್ನು ವೇಗಗೊಳಿಸಿ ನೆತ್ತಿಯನ್ನು ಪೋಷಿಸುತ್ತವೆ. Photo Credit: Freepik
ಬೀಟ್ರೂಟ್ ನಲ್ಲಿ ವಿಟಮಿನ್ ಸಿ, ಇ, ಕ್ಯಾರೋಟಿನ್ ನಂತಹ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ. ಇದು ಕೂದಲು ಬಿಳಿಯಾಗುವುದನ್ನು ತಡೆಯುವುದರ ಜೊತೆಗೆ ಬೂದು ಕೂದಲನ್ನು ನೈಸರ್ಗಿಕವಾಗಿ ಗಾಢ ಕಪ್ಪಾಗಿಸಲು ಕೂಡ ಲಾಭದಾಯಕವಾಗಿದೆ.
ಬೀಟ್ರೂಟ್ ಅನ್ನು ತುರಿದು ಅದರ ರಸ ತೆಗೆದು ಇದರಲ್ಲಿ ಸ್ವಲ್ಪ ತೆಂಗಿನೆಣ್ಣೆ ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಬುಡದಿಂದ ತುದಿಯವರೆಗೆ ಈ ಮಿಶ್ರಣವನ್ನು ಹಚ್ಚುವುದರಿಂದ ಕೂದಲಿಗೆ ನೈಸರ್ಗಿಕ ಗಾಢ ಬಣ್ಣ ದೊರೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.