ನಟಿ ಸಾಯಿಪಲ್ಲವಿ ಕೂದಲು ಉದ್ದವಾಗಿ, ಅಷ್ಟೊಂದು ಕಪ್ಪಾಗಿ ಬೆಳೆಯಲು ಹಚ್ಚೋದು ಈ ಎಲೆಯ ರಸವನ್ನಂತೆ! ವಾರಕ್ಕೆ 3 ಬಾರಿ ಬಳಸಿದ್ರೆ ಸಾಕು ಅಂತಾರೆ ನ್ಯಾಚುರಲ್‌ ಬ್ಯೂಟಿ

Sun, 24 Nov 2024-1:36 pm,

ಕೂದಲಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಕೂದಲು ಉದುರುವುದು, ತಲೆಹೊಟ್ಟು, ಬಿಳಿ ಕೂದಲು ಮತ್ತು ಕೂದಲು ಒಣಗುವುದು ಸಾಮಾನ್ಯ ಸಮಸ್ಯೆಗಳಂತಾಗಿವೆ. ಈ ಸಮಸ್ಯೆಗಳು ಅನೇಕ ಕಾರಣಗಳನ್ನು ಹೊಂದಿರಬಹುದು. ಆದರೆ ಕೆಲವರು ಈ ಸಮಸ್ಯೆಯನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಎಲಾ ಉತ್ಪನ್ನಗಳ ಅವಶ್ಯಕತೆಯೇ ಇಲ್ಲದೆ, ಮನೆಯಲ್ಲಿ ನೈಸರ್ಗಿಕವಾಗಿ ಈ ಎಣ್ಣೆಯನ್ನು ಬಳಕೆ ಮಾಡಬಹುದು.

ಅಲೋವೆರಾ ಮತ್ತು ತೆಂಗಿನ ಎಣ್ಣೆ ಎರಡೂ ಕೂದಲಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಈ ಎರಡನ್ನೂ ಒಟ್ಟಿಗೆ ಬಳಸುವುದರಿಂದ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

 

ಅಲೋವೆರಾ ಮತ್ತು ತೆಂಗಿನ ಎಣ್ಣೆಗಳು ನೈಸರ್ಗಿಕ ಪದಾರ್ಥಗಳಾಗಿವೆ. ಇದು ಚರ್ಮ ಮತ್ತು ಕೂದಲಿನ ಆರೈಕೆಯಲ್ಲಿ ಬಹಳ ಮುಖ್ಯವಾಗಿದೆ. ಇವುಗಳಲ್ಲಿರುವ ವಿಟಮಿನ್, ಮಿನರಲ್ಸ್ ಮತ್ತು ಆ್ಯಂಟಿಆಕ್ಸಿಡೆಂಟ್ʼಗಳು ತ್ವಚೆಯನ್ನು ತೇವವಾಗಿಸಿ ಕೂದಲು ಸ್ಟ್ರಾಂಗ್ ಮಾಡುತ್ತದೆ. ಅಲೋವೆರಾ ಕೂದಲನ್ನು ರಕ್ಷಿಸುವ ಜೊತೆಗೆ ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

 

ಒಂದು ಬಟ್ಟಲಿನಲ್ಲಿ ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿಯ ಮೇಲೆ ಮಸಾಜ್ ಮಾಡಿ. ಒಂದು ಗಂಟೆ ಕಾಲ ಹಾಗೆ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

 

ಈ ಹೇರ್ ಪ್ಯಾಕ್ ಅನ್ನು ವಾರಕ್ಕೆ 2-3 ಬಾರಿ ಬಳಸಬಹುದು. ಅಲರ್ಜಿ ಇದ್ದರೆ ಈ ಪ್ಯಾಕ್ ಅನ್ನು ಬಳಸಬೇಡಿ. ಇದನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಒಂದು ವಾರದವರೆಗೆ ಬಳಸಬಹುದು.

 

ಈ ಹೇರ್ ಪ್ಯಾಕ್ ಬದಲಿಗೆ ಅಲೋವೆರಾ ಜೆಲ್ ಅನ್ನು ನೇರವಾಗಿ ನೆತ್ತಿಯ ಮೇಲೆ ಹಚ್ಚಿ 30 ನಿಮಿಷಗಳ ನಂತರ ತೊಳೆಯಿರಿ. ಈ ಟಿಪ್ಸ್‌ ಅನ್ನು ನ್ಯಾಚುರಲ್‌ ಬ್ಯೂಟಿ ಸಾಯಿಪಲ್ಲವಿ ಅನುಸರಿಸುತ್ತಾರೆ ಎಂದು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link