ಅಲೋವೆರಾವನ್ನು ಹೀಗೆ ಬಳಸಿದರೆ ದಷ್ಟ-ಪುಷ್ಟವಾದ ಕೂದಲು ಮೊಣಕಾಲುದ್ದ ಬೆಳೆಯುತ್ತೆ!
ಹೆಚ್ಚಾಗಿ, ಮಾಲಿನ್ಯ, ಧೂಳು, ಕೆಟ್ಟ ಆಹಾರ ಮತ್ತು ಕೂದಲಿನ ಉತ್ಪನ್ನಗಳಲ್ಲಿನ ರಾಸಾಯನಿಕಗಳು ಕೂದಲಿನ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ನಾವಿಂದು ಕೆಲ ನೈಸರ್ಗಿಕ ಮದ್ದುಗಳನ್ನು ತಿಳಿಸಿಕೊಡಲಿದ್ದೇವೆ, ಇದನ್ನು ಬಳಕೆ ಮಾಡಿದರೆ ಸುಲಭವಾಗಿ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು, ಅಷ್ಟೇ ಅಲ್ಲದೆ, ದಪ್ಪವಾದ, ಕಪ್ಪಾದ ಕೂದಲು ನಿಮ್ಮದಾಗುತ್ತದೆ.
ಅಲೋವೆರಾ ಮಾಸ್ಕ್: ಅಲೋವೆರಾ ತ್ವಚೆ ಮತ್ತು ಕೂದಲು ಎರಡಕ್ಕೂ ಒಳ್ಳೆಯದು. ಅಲೋವೆರಾ ಮತ್ತು ಗ್ರೀನ್ ಟೀ ಅನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ, ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ.
ಅಲೋವೆರಾ ಮತ್ತು ಗ್ರೀನ್ ಚಹಾದ ಮಾಸ್ಕ್ ತಯಾರಿಸಲು, ನೀವು ಮೊದಲು ಅಲೋವೆರಾ ಎಲೆಗಳ ಜೆಲ್ ಅನ್ನು ತೆಗೆಯಬೇಕು. ಅದನ್ನು ಮಿಕ್ಸರ್ನಲ್ಲಿ ಹಾಕಿ, ಫಿಲ್ಟರ್ ಮಾಡಿ. ಗ್ರೀನ್ ಟೀ ಸೇರಿಸಿ ಮಾಸ್ಕ್ ತಯಾರಿಸಿಕೊಳ್ಳಿ.
ಈ ಹೇರ್ ಮಾಸ್ಕ್’ನ್ನು ಕೂದಲಿನ ಬುಡದಿಂದಲೇ ಹಚ್ಚಿ, ಸುಮಾರು 30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಅಲೋವೆರಾ ಮತ್ತು ಗ್ರೀನ್ ಟೀ ಮಾಸ್ಕ್ ಬಳಸಿದರೆ ಶೀಘ್ರದಲ್ಲೇ ಫಲಿತಾಂಶವನ್ನು ಪಡೆಯುತ್ತೀರಿ.
ಕೂದಲು ಉದುರುವುದು ಹಾರ್ಮೋನ್ ಅಸಮತೋಲನ ಅಥವಾ ಕೆಲವು ಆಂತರಿಕ ಆರೋಗ್ಯ ಸಮಸ್ಯೆಗಳಿಂದ ಕೂಡ ಆಗಿರಬಹುದು. ಆದ್ದರಿಂದ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)