ಟಾಯ್ಲೆಟ್‌ನಲ್ಲಿ ಮೊಬೈಲ್‌ ಹಿಡ್ಕೊಂಡು ಕುಂತ್ರೆ ಈ ಗಂಭೀರ ರೋಗ ಬರುತ್ತೆ..! ಎಚ್ಚರ

Sat, 13 Apr 2024-1:20 pm,

ಒತ್ತಡದ ಜೀವನ ಶೈಲಿಯಿಂದಾಗಿ, ಸಮಯವಿಲ್ಲದೆ, ಕೊನೆಗೆ ನಾವು ಟಾಯ್ಲೆಟ್‌ಗೆ ಹೋದಾಗ ಫೋನ್ ತೆಗೆದುಕೊಂಡು ಗಂಟೆ ಗಟ್ಟಲೇ ಕುಳಿತುಕೊಳ್ಳುತ್ತೇವೆ. ಕೆಲವೊಂದಿಷ್ಟು ಜನ ಸೋಷಿಯಲ್‌ ಮೀಡಿಯಾ ಬ್ರೌಸ್‌ ಮಾಡುತ್ತಾ ಅಲ್ಲಿಯೇ ಸಮಯ ಕಳೆಯುತ್ತಾರೆ. ಆದ್ರೆ  ಟಾಯ್ಲೆಟ್ ಸೀಟ್ ಮೇಲೆ ಹೀಗೆ ಕುಳಿತುಕೊಂಡು ಸಮಯ ಕಳೆಯುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಸಮಯ ಕಳೆದರೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಟಾಯ್ಲೆಟ್ ರೂಮಿನಲ್ಲಿ ಹತ್ತು ನಿಮಿಷಕ್ಕಿಂತ ಹೆಚ್ಚು ಸಮಯ ಕಳೆಯಬಾರದು. ಏಕೆಂದರೆ ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತರೆ ಆರೋಗ್ಯ ಸಮಸ್ಯೆಗಳು ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಬೆನ್ನು ನೋವು : ಟಾಯ್ಲೆಟ್ ಸೀಟ್ ಮೇಲೆ ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಬೆನ್ನಿನ ಮೇಲಿನ ಒತ್ತಡ ಹೆಚ್ಚುತ್ತದೆ. ಇದರಿಂದ ಬೆನ್ನುನೋವಿನ ಸಮಸ್ಯೆಯೂ ಉಂಟಾಗಬಹುದು. ಇದಲ್ಲದೆ, ಸ್ನಾಯುಗಳಲ್ಲಿ ಊತ ಮತ್ತು ಸೆಳೆತದ ಸಮಸ್ಯೆಗಳೂ ಸಹ ಕಾಣಿಸಿಕೊಳ್ಳಬಹುದು.

ನರಗಳ ಒತ್ತಡ : ಅಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಸಮಯ ಕಳೆದರೆ ಕಾಲುಗಳಷ್ಟೇ ಅಲ್ಲ ಕೈಗಳಿಗೂ ತೊಂದರೆಯಾಗುತ್ತದೆ. ಇದನ್ನು ಪಿಂಚ್ಡ್ ಸಿರೆಗಳು ಎಂದು ಕರೆಯಲಾಗುತ್ತದೆ. ನರಗಳ ಸಮಸ್ಯೆಯಿಂದ ಬಳಲುತ್ತಿರುವ ಜನರು ವಿಶೇಷವಾಗಿ ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯಬಾರದು.

ಪೈಲ್ಸ್ : ಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಕುಳಿತುಕೊಳ್ಳುವುದರಿಂದ ಗುದದ್ವಾರದ ಮೇಲೆ ಒತ್ತಡ ಬೀಳುತ್ತದೆ. ಇದು ಊತ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ, ಇದು ಪೈಲ್ಸ್‌ಗೆ ಕಾರಣವಾಗುತ್ತದೆ. ಅದಕ್ಕೇ ಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಹೊತ್ತು ಕೂರುವುದು ಒಳ್ಳೆಯದಲ್ಲ. 

ಆದಾಗ್ಯೂ, ಕೆಲವರು ಹೊಟ್ಟೆಯ ಸಮಸ್ಯೆಯಿಂದ ಟಾಯ್ಲೆಟ್ ಸೀಟ್ ಮೇಲೆ ಗಂಟೆಗಳ ಕಾಲ ಕುಳಿತುಕೊಳ್ಳುತ್ತಾರೆ. ನಿಮ್ಮ ಆಹಾರ ಪದ್ಧತಿಯತ್ತ ವಿಶೇಷ ಗಮನ ಕೊಡಿ. ಪ್ರತಿನಿತ್ಯದ ಆಹಾರದಲ್ಲಿ ಫೈಬರ್ ಭರಿತ ಆಹಾರಗಳು ಇರುವಂತೆ ನೋಡಿಕೊಳ್ಳಿ. ಇದಲ್ಲದೆ, ಟಾಯ್ಲೆಟ್ ಸೀಟಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾವಿದೆ. ಮೊಬೈಲ್ ಒಯ್ದರೆ ಅದೂ ಟಾಯ್ಲೆಟ್ ಅದಕ್ಕೂ ಅಂಟಿಕೊಳ್ಳುವ ಸಾಧ್ಯತೆ ಇದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link