ಮನೆಯ ಹಿತ್ತಲಿನಲ್ಲೇ ಸಿಗುವ ಈ ಮನೆಮದ್ದನ್ನ ಬಳಸಿದ್ರೆ ತಕ್ಷಣವೇ ಶುಗರ್ ಕಂಟ್ರೋಲ್ ಆಗುತ್ತೆ!!
ಇಂದು ಅನೇಕ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭಾರತವನ್ನು ಮಧುಮೇಹಿಗಳ ರಾಜಧಾನಿ ಎಂದು ಹೇಳಲಾಗುತ್ತದೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (IDF) ಇತ್ತೀಚಿನ ವರದಿಯಲ್ಲಿ ಭಾರತ ಮಧುಮೇಹಿಗಳ ರಾಜಧಾನಿ ಎಂದು ಘೋಷಿಸಿದೆ. ಭಾರತದ ಶೇ.9ರಷ್ಟು ಜನರು 2030ರ ವೇಳೆಗೆ ಮಧುಮೇಹಿಗಳಾಗಿರುತ್ತಾರೆ ಎಂದು ತಿಳಿಸಿದೆ. ಹೀಗಿರುವಾಗ ವೈದ್ಯರ ಸಲಹೆಯಂತೆ ಆಹಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಮಧುಮೇಹವನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ನುಗ್ಗೆ ಕಾಯಿ, ಅದರ ಎಲೆಗಳು ಮತ್ತು ಹೂವುಗಳನ್ನು ಸೇರಿಸುವುದು ಒಳ್ಳೆಯದು. ಇವು ವಿವಿಧ ಔಷಧೀಯ ಗುಣಗಳನ್ನು ಹೊಂದಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ವಿಶೇಷವಾಗಿ ಇದು ಇನ್ಸುಲಿನ್ ತರಹದ ಪ್ರೋಟೀನ್‌ಗಳನ್ನು ಹೊಂದಿರುತ್ತದೆ.
ಈ ನುಗ್ಗೆಯಲ್ಲಿರುವ ಕೆಲವು ಅಂಶಗಳು ಮಧುಮೇಹದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ನೀವು ನಿಮ್ಮ ಆಹಾರದಲ್ಲಿ ಇದನ್ನು ಸೇರಿಸಿದಾಗ, ನಮ್ಮ ದೇಹದಲ್ಲಿ ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೀವು ಪ್ರತಿದಿನ ವಿವಿಧ ರೀತಿಯಲ್ಲಿ ನುಗ್ಗೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನೀವು ಇದನ್ನು ನಿಯಮಿತವಾಗಿ ಸೇವಿಸಿದರೆ ಅದು ರಕ್ತದೊತ್ತಡವನ್ನು ಕಡಿಮೆಯಾಗುತ್ತದೆ.
ನಿಮಗೆ ಮಧುಮೇಹ ಇದ್ದರೆ ವೈದ್ಯರ ಸಲಹೆಯಂತೆ ನುಗ್ಗೆಯನ್ನು ತೆಗೆದುಕೊಳ್ಳಬೇಕು. ದಿನಕ್ಕೆ 1 ರಿಂದ 2 ಸಲಕ್ಕಿಂತ ಹೆಚ್ಚು ತಿನ್ನಬೇಡಿ. ಅತಿಯಾಗಿ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಗಂಭೀರ ಪರಿಣಾಮ ಉಂಟುಮಾಡುತ್ತದೆ. ಹೀಗಾಗಿ ನಿಯಮಿತವಾಗಿ ಅಗತ್ಯಕ್ಕೆ ತಕ್ಕಷ್ಟು ನುಗ್ಗೆಯನ್ನು ಸೇವಿಸಬೇಕು. ನೀವು ವೈದ್ಯರ ಸಲಹೆ ಮೇರೆಗೆ ನುಗ್ಗೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.