ವೈಕುಂಠ ಏಕಾದಶಿಯಂದೇ ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು, ವಿಷ್ಣು ಕೃಪೆಯಿಂದ ಸಂಪತ್ತಿಗೆ ಕೊರತೆಯೇ ಇಲ್ಲದ ಜೀವನ ಇವರದು..!
ಈ ವರ್ಷ ಜನವರಿ 10, 2025ರ ಶುಕ್ರವಾರದ ದಿನ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಚಂದ್ರನು ತನ್ನ ಉಚ್ಚ ರಾಶಿಯಾದ ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ವೈಕುಂಠ ಏಕಾದಶಿ ದಿನವೇ ಅದೃಷ್ಟದ ಬಾಗಿಲುಗಳು ತೆರೆಯಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ವೈಕುಂಠ ಏಕಾದಶಿಯಿಂದ ಕೆಲವು ರಾಶಿಯ ಜನರು ಭಗವಾನ್ ವಿಷ್ಣು ಸಂಪತ್ತಿನ ದೇವತೆ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದವನ್ನು ಪಡೆಯಲಿದ್ದಾರೆ. ಅವರ ಜೀವನದಲ್ಲಿ ಇನ್ನೆನಿದ್ದರೂ ಬರೀ ಸುಖ-ಸಂತೋಷವೇ ಎನ್ನಲಾಗುತ್ತಿದೆ.
ಮೇಷ ರಾಶಿ: ವೈಕುಂಠ ಏಕಾದಶಿಯಿಂದ ನಿಮ್ಮ ಜೀವನದಲ್ಲಿ ಎಲ್ಲಾ ಆಯಾಮಗಳಲ್ಲೂ ಹೊಸ ಹೊಸ ಅವಕಾಶಗಳು ಹುಡುಕಿ ಬರಲಿವೆ. ವ್ಯಾಪಾರ-ಉದ್ಯೋಗಗಳಲ್ಲಿ ಅಘಾದ ಯಶಸ್ಸನ್ನು ಗಳಿಸುವಿರಿ. ಹಣಕಾಸಿನ ಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ.
ಕರ್ಕಾಟಕ ರಾಶಿ: ವೈಕುಂಠ ಏಕಾದಶಿಯಲ್ಲಿ ಈ ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಜೀವನದಲ್ಲಿ ಕಷ್ಟದ ದಿನಗಳು ಸರಿದು ಸುಖ ಪ್ರಾಪ್ತಿಯಾಗಲಿದೆ. ವ್ಯವಹಾರದಲ್ಲಿ ಭಾರೀ ಲಾಭವನ್ನು ಗಳಿಸುವಿರಿ. ಕೌಟುಂಬಿಕ ಸುಖ ಹೆಚ್ಚಾಗಲಿದೆ.
ತುಲಾ ರಾಶಿ: 2025ರ ವೈಕುಂಠ ಏಕಾದಶಿಯು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ವೃತ್ತಿ ವ್ಯವಹಾರದಲ್ಲಿ ಅಪಾರ ಕೀರ್ತಿ, ಯಶಸ್ಸನ್ನು ಗಳಿಸುವಿರಿ. ವೃತ್ತಿಪರರಿಗೆ ಪ್ರಮೋಷನ್ ಸಾಧ್ಯತೆ ಇದೆ.
ಧನು ರಾಶಿ: ಭಗವಾನ್ ವಿಷ್ಣುವಿನ ಆಶೀರ್ವಾದದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಯಲ್ಲಿ ಪ್ರಗತಿಯನ್ನು ಕಾಣುವಿರಿ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅದೃಷ್ಟ ಖುಲಾಯಿಸಲಿದೆ. ಮನೆಯಲ್ಲಿ ಆಹ್ಲಾದಕರ ವಾತಾವರಣ ಇರಲಿದೆ.
ಮೀನ ರಾಶಿ: ವೈಕುಂಠ ಏಕಾದಶಿಯ ದಿನದಿಂದ ಈ ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಬಂಪರ್ ಆದಾಯವನ್ನು ಗಳಿಸುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.