ವೈಕುಂಠ ಏಕಾದಶಿಯ ಈ ಪವಿತ್ರ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿವೆ ವಿಶೇಷ ಸಂದೇಶಗಳು
vaikuntha ekadashi wishes in kannada: ವೈಕುಂಠ ಏಕಾದಶಿ ಎಲ್ಲಾ ಹಿಂದೂಗಳು ಪವಿತ್ರ ಉಪವಾಸ ವೃತ ಆಚರಿಸುವ ದಿನವಾಗಿದೆ. ವಿಷ್ಣುವಿನ ಪೂಜೆಗೆ ಈ ದಿನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಆರಂಭಿಸಿದ ಕೆಲಸವು ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಎಂದು ಹೇಳುತ್ತಾರೆ.
ವೈಕುಂಠ ಏಕಾದಶಿಯನ್ನು ಭಕ್ತರು ಅತ್ಯಂತ ಮಂಗಳಕರವೆಂದು ಪರಿಗಣಿಸುತ್ತಾರೆ. ವಿಶೇಷವಾಗಿ ಇಂದು ಶ್ರೀ ಮನ್ನಾರಾಯಣನು ಮೂರು ಕೋಟಿ ದೇವತೆಗಳೊಂದಿಗೆ ಭೂಮಿಗೆ ಬರುತ್ತಾನೆ ಎಂದು ಭಕ್ತರು ನಂಬುತ್ತಾರೆ.
ಈ ಬಾರಿ ಜನವರಿ 10ರ ಶುಕ್ರವಾರ ಮುಕ್ಕೋಟಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಈ ದಿನ ವಿಶೇಷವಾಗಿ ಉತ್ತರ ದ್ವಾರದ ಮೂಲಕ ಸ್ವಾಮಿ ನಾರಾಯಣನ ದರ್ಶನ ಪಡೆಯಬೇಕು ಎನ್ನುತ್ತಾರೆ.
ಮುಕ್ಕೋಟಿ ಏಕಾದಶಿಯಿಂದ ಶುಭ ಉತ್ತರಾಯಣ ಕಾಲ ಆರಂಭವಾಗುತ್ತದೆ. ಈ ಅವಧಿಯಲ್ಲಿ ಮಾಡುವ ಪೂಜೆ, ವ್ರತ, ಕೀರ್ತನೆಗಳು ಸಹ ಸಾವಿರಾರು ಫಲ ನೀಡುತ್ತವೆ ಎಂದು ಹೇಳಲಾಗುತ್ತದೆ. ಉತ್ತರಾಯಣವನ್ನು ದೇವತೆಗಳ ದಿನವೆಂದು ಹೇಳಲಾಗುತ್ತದೆ.
ಅದಕ್ಕಾಗಿಯೇ ಮಹಾಭಾರತದಲ್ಲಿ ಭೀಷ್ಮ.. ಉತ್ತರಾಯಣ ಕಾಲದ ಆರಂಭದವರೆಗೂ ತಡೆದು ನಂತರ ಮೋಕ್ಷವನ್ನು ಪಡೆಯುತ್ತಾನೆ.
ವೈಕುಂಠ ಏಕಾದಶಿಯ ದಿನ ಉತ್ತರ ದಿಕ್ಕಿನ ಬಾಗಿಲ ಮೂಲಕ ಹೋಗಿ ಆ ವಿಷ್ಣುಮೂರ್ತಿಯ ದರ್ಶನ ಮಾಡಿದರೆ ಮೋಕ್ಷದ ಜೊತೆಗೆ ಮನದಲ್ಲಿ ಏನೇನು ಆಸೆ ಇತ್ತೋ ಅದು ನೆರವೇರುತ್ತದೆ ಎನ್ನುತ್ತಾರೆ.
ಈ ಪವಿತ್ರ ವೈಕುಂಠ ಏಕಾದಶಿ ದಿನದಂದು ನಿಮ್ಮ ಕುಟುಂಬದ ಸದಸ್ಯರಿಗೆ, ಬಂಧುಗಳಿಗೆ, ಸ್ನೇಹಿತರಿಗೆ ವಾಟ್ಸಪ್, ಸಂದೇಶ, ಫೋಟೋಗಳ ಮೂಲಕ ವಿಶೇಷ ಶುಭಾಶಯಗಳನ್ನು ತಿಳಿಸಿ ಆ ನಾರಾಯಣನ ಕೃಪೆಗೆ ಪಾತ್ರರಾಗಲೆಂದು ಹಾರೈಸೋಣ.