300 ಕ್ಕೂ ಹೆಚ್ಚು ಮದುವೆ ಪ್ರಸ್ತಾಪ ಬಂದಿತ್ತಂತೆ ಕನ್ನಡದ ಈ ನಟಿಗೆ !ಆದರೂ ಇನ್ನೂ ಈಕೆಗೆ ಮದುವೆಯಾಗಿಲ್ಲ

Wed, 21 Feb 2024-3:39 pm,

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಗುಳಿ ಕೆನ್ನೆ ಚೆಲುವೆ ವೈಷ್ಣವಿ ಗೌಡ. ಇವರು ತಮ್ಮ ನಟನೆ ಮೂಲಕ ಎಲ್ಲರ ಮನ ಗೆದ್ದಿದ್ದಾರೆ ವೈಷ್ಣವಿ.   

ಧಾರವಾಹಿ ಮೂಲಕ ಮನೆ ಮಾತಾಗಿರುವ ಇವರು ಕೆಲವೊಂದು ಸಿನಿಮದಲ್ಲಿಯೂ ನಟಿಸಿದ್ದಾರೆ. ರವಿಕಿರಣ್ ನಿರ್ದೇಶನದ ಗಿರ್ಗಿಟ್ಲೆ ಎಂಬ ಸಿನಿಮಾದಲ್ಲಿ ವೈಷ್ಣವಿ ಕಾಣಿಸಿಕೊಂಡಿದ್ದಾರೆ. 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಪಾತ್ರ ನಿರ್ವಹಿಸುತ್ತಿರುವ ವೈಷ್ಣವಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಿರುವ ವೈಷ್ಣವಿ  ತಮ್ಮ ನೇರ ನಡವಳಿಕೆ ಮತ್ತು ಇತರ ತಂಡದ ಸದಸ್ಯರೊಂದಿಗೆ ತಮ್ಮ ಬಾಂಧವ್ಯದಿಂದ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದರು.

ಚೆಂದುಳ್ಳಿ ಚೆಲುವೆ ವೈಷ್ಣವಿ ಗೌಡಗೆ ಇದುವರೆಗೆ 200-300 ಪ್ರಪೋಸಲ್ ಬಂದಿದೆಯಂತೆ. ಬಿಗ್ ಬಾಸ್ ಕನ್ನಡ ನಿರೂಪಕ ಕಿಚ್ಚ ಸುದೀಪ್ ಅವರೊಂದಿಗಿನ ಮಾತುಕೆತೆ ವೇಳೆ ವೈಷ್ಣವಿ ಈ ವಿಷಯವನ್ನು   ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ವೇಳೆ ನಿಮಗೆ ಇಲ್ಲಿಯವರೆಗೆ ಎಷ್ಟು ಪ್ರೊಪೋಸಲ್ ಬಂದಿವೆ ಎಂದು ಸುದೀಪ್ ಕೇಳಿದಾಗ ವೈಷ್ಣವಿ ಸುಮಾರು 200-300 ಪ್ರಸ್ತಾಪಗಳು ಬಂದಿವೆ ಎಂದು ಉತ್ತರಿಸಿದ್ದಾರೆ.   

ಆದರೆ ಯಾರೊಂದಿಗೂ ಅಂಥಹ ವೈಬ್ ಬಾರದ ಕಾರಣ ಯಾರನ್ನೂ ಇವರು ಮದುವೆಗೆ ಒಪ್ಪಿಕೊಂಡಿಲ್ಲವಂತೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link