ವ್ಯಾಲೆಂಟೈನ್ಸ್ ಡೇ: ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತೆ?
ನಮ್ಮಲ್ಲಿ ಹೆಚ್ಚಿನ ಮಂದಿಗೆ ರೆಡ್ ರೋಸ್ ಅರ್ಥಾತ್ ಕೆಂಪು ಗುಲಾಬಿ ಎಂದರೆ ತುಂಬಾ ಪ್ರಿಯ. ಇದು ಪ್ರೀತಿ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.
ಗುಲಾಬಿ ಬಣ್ಣದ ರೋಸ್ ಮೆಚ್ಚುಗೆಯನ್ನು ಸೂಚಿಸುತ್ತದೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ಯಾರಿಗಾದರೂ ಗುಲಾಬಿ ಬಣ್ಣದ ರೋಸ್ ನೀಡಿದರೆ ಅದು ಅವರ ಪ್ರೀತಿಯನ್ನು ಮೆಚ್ಚಿಕೊಂಡಿರುವುದನ್ನು ಸೂಚಿಸುತ್ತದೆ.
ಕಿತ್ತಳೆ ಬಣ್ಣವು ಪ್ರೀತಿಸುವವರ ಬಗೆಗಿನ ನಿಮ್ಮ ಅಪಾರವಾದ ಉತ್ಸಾಹವನ್ನು ಸೂಚಿಸುತ್ತದೆ.
ಬಿಳಿ ಬಣ್ಣವು ಶಾಂತಿ, ಸರಳತೆಯ ಸಂಕೇತ. ಈಗಷ್ಟೇ ಚಿಗುರೊಡೆಯುತ್ತಿರುವ ಪ್ರೇಮ ನಿವೇದನೆಗೆ ಬಿಳಿ ಗುಲಾಬಿ ನೀಡುವುದು ಹೆಚ್ಚು ಸೂಕ್ತ.
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರಿಗೆ ನಿಮ್ಮ ಪ್ರೀತಿಯ ಬಗ್ಗೆ ತಿಳಿಸಲು ಪೀಚ್ ಬಣ್ಣದ ಗುಲಾಬಿಗಳನ್ನ್ಜು ನೀಡಿ.
ಹಳದಿ ಬಣ್ಣವು ಅಜೀವ ಸ್ನೇಹದ ಭರವಸೆಯನ್ನು ನೀಡುತ್ತದೆ. ನೀವು ನಿಮ್ಮ ಸ್ನೇಹಿತರಿಗೆ ಗುಲಾಬಿಯನ್ನು ನೀಡಲು ಬಯಸಿದರೆ ಹಳದಿ ಬಣ್ಣದ ಗುಲಾಬಿಗಳನ್ನು ನೀಡಬಹುದು.