Valentine Week 2024: ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಈ ವಸ್ತುಗಳನ್ನು ನಿಡುವುದರಿಂದ ಸಂಬಂಧದಲ್ಲಿ ಬಿರುಕು ಸಾಧ್ಯತೆ!

Fri, 09 Feb 2024-6:46 am,

ವ್ಯಾಲೆಂಟೈನ್ಸ್ ಡೇ ಗಿಫ್ಟ್:  ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರೇಮಿಗಳು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ, ಈ ರೀತಿ ಗಿಫ್ಟ್ ನೀಡುವಾಗ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ವ್ಯಾಲೆಂಟೈನ್ಸ್ ಡೇಯಲ್ಲಿ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಲೇಬಾರದು. ಈ ವಸ್ತುಗಳನ್ನು ಗಿಫ್ಟ್ ಆಗಿ ನೀಡುವುದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು ಎಂದು ಹೇಳಲಾಗುತ್ತದೆ. ಅಂತಹ ಐದು ವಸ್ತುಗಳೆಂದರೆ... 

ಹಿಂದೂ ಧರ್ಮದಲ್ಲಿ ಯಾವುದೇ ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ನೀವು ನಿಮ್ಮ ವ್ಯಾಲೆಂಟೈನ್ ಗೆ ಕಪ್ಪು ಬಟ್ಟೆಯನ್ನು ಉಡುಗೊರೆಯಾಗಿ ನೀಡುವನ್ನು ತಪ್ಪಿಸಿ. ಇದರಿಂದ ಜೀವನದಲ್ಲಿ ಹಲವು ಸಮಸ್ಯೆಗಳು ಉಂಟಾಗಬಹುದು ಎನ್ನಲಾಗುತ್ತದೆ. 

ಪ್ರೇಮಿಗಳ ದಿನದ ಸಂದರ್ಭದಲ್ಲಿ ನಿಮ್ಮ ಪ್ರೇಮಿಗೆ ವಾಚ್ ಅನ್ನು ಗಿಫ್ಟ್ ಆಗಿ ನೀಡುವುದನ್ನು ತಪ್ಪಿಸಿ. ಇದಕ್ಕೆ ಮುಖ್ಯ ಕಾರಣವೆಂದರೆ ಯಾರಿಗಾದರೂ ಗಡಿಯಾರವನ್ನು ಗಿಫ್ಟ್ ಆಗಿ ನೀಡುವುದರಿಂದ  ವೃತ್ತಿ, ವ್ಯವಹಾರ, ಉದ್ಯೋಗದಲ್ಲಿ ಪ್ರಗತಿ ಕುಂಠಿತಗೊಳ್ಳುತ್ತದೆ. ಮಾತ್ರವಲ್ಲ, ಇದು ನಿಮ್ಮ ಸಂಬಂಧದ ನಡುವೆ ಮನಸ್ತಾಪವನ್ನು ಸೃಷ್ಟಿಸಬಹುದು ಎನ್ನಲಾಗುತ್ತದೆ. 

ಕೆಲವರು ತಾವು ಬಳಸಿದ ವಸ್ತುಗಳನ್ನು ತಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಕರವಸ್ತ್ರದಲ್ಲಿ ವಿಶೇಷವಾಗಿ ಏನಾದರೂ ಹೊಲಿಗೆ ಕೆಲಸ ಮಾಡಿ ಅದನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ, ಕರವಸ್ತ್ರವನ್ನು ಗಿಫ್ಟ್ ರೂಪದಲ್ಲಿ ನೀಡುವುದರಿಂದ ಸಂಬಂಧದಲ್ಲಿ ಕಹಿ ಭಾವನೆ ಉಂಟಾಗಬಹುದು. 

ಸುಗಂಧ ದ್ರವ್ಯವು ಸುಮಧುರವಾಗಿ ಪರಿಮಳಯುಕ್ತವಾಗಿರುತ್ತದೆ. ಆದರೂ, ಬೇರೆಯವರಿಗೆ ಅದರಲ್ಲೂ ನಿಮ್ಮ ಸಂಗಾತಿಗೆ/ಪ್ರೇಮಿಗೆ ಇದನ್ನು ಉಡುಗೊರೆಯಾಗಿ ನೀಡುವುದರಿಂದ ಪರಸ್ಪರರ ನಡುವೆ ಅಂತರ ಸೃಷ್ಟಿಯಾಗಬಹುದು ಎನ್ನಲಾಗುತ್ತದೆ. 

ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಕೆಲವರು ತಮ್ಮ ಪ್ರೇಮಿಗೆ ಡಿ ಶೂಗಳು ಮತ್ತು ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಲು ಇಷ್ಟಪಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಇವುಗಳನ್ನು ಉಡುಗೊರೆಯಾಗಿ ನೀಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಯಾಗುತ್ತದೆ. ಇದರಿಂದಾಗಿ ಸಂಬಂಧದಲ್ಲಿ ಜಗಳ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link