Valentine Day Gift: ಪ್ರೇಮಿಗಳ ದಿನದಂದು ರಾಶಿಗನುಗುಣವಾಗಿ ನಿಮ್ಮ ಪ್ರೀತಿಯ ಸಂಗಾತಿಗೆ ನೀಡಿ ಗಿಫ್ಟ್, ಗಟ್ಟಿಯಾಗುತ್ತೆ ಸಂಬಂಧ

Wed, 14 Feb 2024-6:47 am,

ವ್ಯಾಲೆಂಟೈನ್ ಡೇ ಗಿಫ್ಟ್:  ಇಂದು ಫೆಬ್ರವರಿ 14 ಪ್ರೇಮಿಗಳ ದಿನ. ಪ್ರೀತಿಯಲ್ಲಿ ಬಿದ್ದಿರುವ 'ಲವ್ ಬರ್ಡ್ಸ್' ಮಾತ್ರವಲ್ಲ ವಿವಾಹ ಬಂಧನದಲ್ಲಿ ಬಂಧಿಯಾಗಿರುವ ಪತಿ-ಪತ್ನಿಯೂ ಕೂಡ ಈ ದಿನ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಗನುಗುಣವಾಗಿ ನೀವು ನಿಮ್ಮ ಪ್ರೀತಿಯ ಸಂಗಾತಿಗೆ 'ವ್ಯಾಲೆಂಟೈನ್ ಡೇ ಗಿಫ್ಟ್' ನೀಡುವುದರಿಂದ ಪರಸ್ಪರರ ನಡುವೆ ಪ್ರೀತಿ ಹೆಚ್ಚಾಗುವುದರ ಜೊತೆಗೆ ಸಂಬಂಧಗಳು ಮೊದಲಿಗಿಂತಲೂ ಬಲಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಪ್ರೇಮಿಗಳ ದಿನದಂದು ಯಾವ ರಾಶಿಯವರು ಯಾವ ಗಿಫ್ಟ್ ನೀಡಬೇಕು ಎಂದು ತಿಳಿಯೋಣ... 

ಮೇಷ ರಾಶಿ:   ಮೇಷ ರಾಶಿಯವರು ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಉಡುಗೊರೆ ನೀಡಲು ಯೋಚಿಸುತ್ತಿದ್ದರೆ ಸುಗಂಧ ದ್ರವ್ಯ ಮತ್ತು ಮಲ್ಲಿಗೆ ಹೂವನ್ನು ನೀಡಬಹುದು. 

ವೃಷಭ ರಾಶಿ:   ವೃಷಭ ರಾಶಿಯವರು  'ವ್ಯಾಲೆಂಟೈನ್ ಡೇ ಗಿಫ್ಟ್' ಆಗಿ ನಿಮ್ಮ ಸಂಗಾತಿಗೆ ಡಿನ್ನರ್ ಆಯೋಜಿಸಬಹುದು. ಜೊತೆಗೆ ಪುಷ್ಪಗುಚ್ಛವನ್ನು ನೀಡಬಹುದು. 

ಮಿಥುನ ರಾಶಿ:   ಮಿಥುನ ರಾಶಿಯವರು ತಮ್ಮ ಸಂಗಾತಿಗೆ ಪ್ರೇಮಿಗಳ ದಿನದಂದು ಅವರ ನೆಚ್ಚಿನ ಬಟ್ಟೆಯನ್ನು  ಉಡುಗೊರೆಯಾಗಿ ನೀಡುವುದರಿಂದ ಸಂಬಂಧ ಬಲಗೊಳ್ಳುತ್ತದೆ. 

ಕರ್ಕಾಟಕ ರಾಶಿ:  ಕರ್ಕಾಟಕ ರಾಶಿಯ ಜನರು ತಮ್ಮ ಸಂಗಾತಿಗೆ ಯೋಗಾಭ್ಯಾಸಕ್ಕೆ ಸಂಬಂಧಿಸಿದ ಪುಸ್ತಕ ಅಥವಾ ಜಿಮ್‌ಗೆ ಸಂಬಂಧಿಸಿದ ಯಾವುದೇ ವಸ್ತುವನ್ನು 'ವ್ಯಾಲೆಂಟೈನ್ ಡೇ ಗಿಫ್ಟ್' ಆಗಿ ನೀಡಬಹುದು. 

ಸಿಂಹ ರಾಶಿ:    ಸಿಂಹ ರಾಶಿಯ ಜನರು ನಿಮ್ಮ ಸಂಗಾತಿಗೆ  'ವ್ಯಾಲೆಂಟೈನ್ ಡೇ ಗಿಫ್ಟ್' ಆಗಿ ನೀಲಿ ಬಣ್ಣದ ಹೂವುಗಳ ಜೊತೆಗೆ, ಪರ್ಸ್, ಬ್ಯಾಗ್ ರೀತಿಯ ವಸ್ತುಗಳನ್ನು ನೀಡಬಹುದು. 

ಕನ್ಯಾ ರಾಶಿ:  ಕನ್ಯಾ ರಾಶಿಯವರು ತಮ್ಮ ಸಂಗಾತಿಗೆ ಪುಸ್ತಕಗಳ ಜೊತೆಗೆ ಹಳದಿ ಟುಲಿಪ್ ಹೂವುಗಳನ್ನು ಪ್ರೇಮಿಗಳ ದಿನದ ಉಡುಗೊರೆಯಾಗಿ ನೀಡುವುದರಿಂದ ನಿಮ್ಮ ಪ್ರೇಮ ಸಂಬಂಧ ಗಟ್ಟಿಯಾಗುತ್ತದೆ. 

ತುಲಾ ರಾಶಿ:   ತುಲಾ ರಾಶಿಯವರು ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಲು ಕೆಂಪು ಗುಲಾಬಿಗಳು ಮತ್ತು ನೆಚ್ಚಿನ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ. 

ವೃಶ್ಚಿಕ ರಾಶಿ:    ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಗೆ ಈ ವ್ಯಾಲೆಂಟೈನ್ಸ್ ಡೇ ಅನ್ನು ಸ್ಮರಣೀಯವಾಗಿಸಲು ಒಳ್ಳೆಯ ರೆಸ್ಟೋರೆಂಟ್‌ನಲ್ಲಿ ಅಚ್ಚರಿಯ ಪಾರ್ಟಿಯನ್ನು ಯೋಜಿಸಿ ಬಿಳಿ ಬಣ್ಣದ ಹೂವುಗಳನ್ನು ಉಡುಗೊರೆಯಾಗಿ ನೀಡಬಹುದು. 

ಧನು ರಾಶಿ:   ಧನು ರಾಶಿಯವರು ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಪ್ರಯತ್ನಿಸಿ. ಇದರೊಂದಿಗೆ ನಿಮ್ಮ ಸಂಗಾತಿಗೆ ಅವರ ಆಯ್ಕೆಯ ಸಂಗೀತ ವಾದ್ಯವನ್ನು   'ವ್ಯಾಲೆಂಟೈನ್ ಡೇ ಗಿಫ್ಟ್' ಆಗಿ ನೀಡಬಹುದು. 

ಮಕರ ರಾಶಿ:   ಮಕರ ರಾಶಿಯವರು ನಿಮ್ಮ ಪ್ರೀತಿಯ ಸಂಗಾತಿಗೆ ಈ 'ವ್ಯಾಲೆಂಟೈನ್ಸ್ ಡೇ'ಯಲ್ಲಿ  ತ್ವಚೆಗೆ ಸಂಬಂಧಿಸಿದ ವಸ್ತುಗಳ ಜೊತೆಗೆ ಬಿಳಿ ಮತ್ತು ಗುಲಾಬಿ ಹೂವುಗಳನ್ನು ಉಡುಗೊರೆಯಾಗಿ ನೀಡುವುದು ಶುಭಕರವಾಗಿದೆ. 

ಕುಂಭ ರಾಶಿ:   ಕುಂಭ ರಾಶಿಯವರು ಇಂದು ನಿಮ್ಮ ಪ್ರೀತಿಯ ಸಂಗಾತಿಗೆ ಸೂರ್ಯಕಾಂತಿ ಹೂವುಗಳ ಜೊತೆಗೆ ಆಭರಣವನ್ನು ಉಡುಗೊರೆಯಾಗಿ ನೀಡಬಹುದು. 

ಮೀನ ರಾಶಿ:   ಮೀನ ರಾಶಿಯ ಜನರು ಈ ವ್ಯಾಲೆಂಟೈನ್ಸ್ ಡೇಯನ್ನು ವಿಶೇಷವಾಗಿಸಲು ನಿಮ್ಮ ಪ್ರೀತಿಯ ಸಂಗಾತಿಗೆ ಶೋ ಪೀಸ್, ಫೋಟೋ ಫ್ರೇಮ್, ಹಳದಿ ಹೂವುಗಳನ್ನು ಉಡುಗೊರೆಯಾಗಿ ನೀಡುವುದು ಮಂಗಳಕರ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link