Vande Bharat Sleeper Train: ‘ವಂದೇ ಭಾರತ್’ನ ಸ್ಲೀಪರ್ ಕೋಚ್‍ನಲ್ಲಿ ಐಷಾರಾಮಿ ಹೋಟೆಲ್ ಅನುಭವ
ಮೂಲಗಳ ಪ್ರಕಾರ ವಂದೇ ಭಾರತ್ ಸ್ಲೀಪರ್ ರೈಲು 20 ರಿಂದ 22 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಒಟ್ಟು 857 ಸೀಟುಗಳು ಇರಲಿವೆ. ಈ ಪೈಕಿ 34 ಸೀಟುಗಳನ್ನು ಸಿಬ್ಬಂದಿಗೆ ಮೀಸಲಿಡಲಾಗಿದ್ದು, 823 ಬರ್ತ್‌ಗಳು ಪ್ರಯಾಣಿಕರಿಗೆ ತೆರೆದಿರುತ್ತವೆ.
ಈ ರೈಲಿನ ಒಳಾಂಗಣ ವಿನ್ಯಾಸವನ್ನು ಪಂಚತಾರಾ ಹೋಟೆಲ್ ಮಾದರಿಯಲ್ಲಿ ರೂಪಿಸಲಾಗಿದೆ. ಅಂದರೆ ಆಸನಗಳಿಂದ ಹಿಡಿದು ಮೆಟ್ಟಿಲುಗಳು, ದೀಪಗಳು, ಶುಚಿತ್ವ ಎಲ್ಲವೂ ನಿಮಗೆ ದೊಡ್ಡ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಅನುಭವ ನೀಡುತ್ತದೆ. ಇದರಿಂದ ಪ್ರಯಾಣಿಕರ ಪ್ರಯಾಣದ ಆನಂದ ದ್ವಿಗುಣಗೊಳ್ಳಲಿದೆ.
ರೈಲ್ವೆ ಮೂಲಗಳ ಪ್ರಕಾರ ಸ್ಲೀಪರ್ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ಯಾಂಟ್ರಿ ಕಾರ್ ಕಂಪಾರ್ಟ್‌ಮೆಂಟ್ ಇರುವುದಿಲ್ಲ. ಬದಲಾಗಿ ರೈಲಿನ ಪ್ರತಿ ಕೋಚ್‌ನಲ್ಲಿ ಮಿನಿ ಪ್ಯಾಂಟ್ರಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುವುದು.
ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಅಂಗವಿಕಲ ಪ್ರಯಾಣಿಕರನ್ನು ಹತ್ತಲು ಮತ್ತು ಡಿಬೋರ್ಡಿಂಗ್ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ರೈಲಿನಲ್ಲಿ ಅವರಿಗಾಗಿ ಇಳಿಜಾರು ಮತ್ತು ಗಾಲಿಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಫುಟ್ ರೆಸ್ಟ್ ಎಕ್ಸ್ ಟೆನ್ಷನ್ ಮತ್ತು ಮೆತ್ತನೆಯ ಸೀಟ್ ವ್ಯವಸ್ಥೆ ಮಾಡಲಾಗಿದೆ.
ಪ್ರಸ್ತುತ ವಂದೇ ಭಾರತ್ ಸ್ಲೀಪರ್ ರೈಲು ಯಾವಾಗ ಪ್ರಾರಂಭವಾಗಲಿದೆ ಮತ್ತು ಆರಂಭದಲ್ಲಿ ಯಾವ ಮಾರ್ಗದಲ್ಲಿ ಚಲಿಸುತ್ತದೆ ಎಂಬುದರ ಕುರಿತು ಯಾವುದೇ ಪ್ರಕಟಣೆಯನ್ನು ತಿಳಿಸಿಲ್ಲ. ಮುಂದಿನ ವರ್ಷದ ಜನವರಿ-ಫೆಬ್ರವರಿಯಲ್ಲಿ ಇದರ ಪ್ರಯೋಗ ಪ್ರಾರಂಭವಾಗಬಹುದು ಮತ್ತು ಈ ರೈಲಿನ ಈ ಆವೃತ್ತಿಯು ಏಪ್ರಿಲ್ 2024ರ ವೇಳೆಗೆ ಕಾರ್ಯಾಚರಣೆಗೆ ಬರಬಹುದು ಎಂದು ನಂಬಲಾಗಿದೆ.