ಈ ರಾಶಿಯ ಪಾಲಿಗೆ ಸಂಪತ್ತು-ಸಮೃದ್ಧಿ ತರಲಿದೆ ವರಲಕ್ಷ್ಮೀ ವ್ರತ: ಅಗಾಧ ಯಶಸ್ಸು-ತಾನಾಗಿಯೇ ಒಲಿವಳು ಧನಲಕ್ಷ್ಮೀ

Sat, 19 Aug 2023-9:01 am,

ವರಮಹಾಲಕ್ಷ್ಮಿ ದೇವಿಯು ಮಾತೆ ಲಕ್ಷ್ಮಿದೇವಿಯ ಅತ್ಯಂತ ಮಂಗಳಕರ ರೂಪಗಳಲ್ಲಿ ಒಂದಾಗಿದೆ. ‘ವರ’ ಎಂದರೆ ‘ಬೇಡಿದ್ದು ಪಾಪ್ತಿಯಾಗುವುದು’ ಮತ್ತು ‘ಲಕ್ಷ್ಮಿ’ ಎಂದರೆ ‘ಸಂಪತ್ತು’. ವರಲಕ್ಷ್ಮಿ ದೇವಿಯು ಪ್ರಸನ್ನಳಾದಾಗ, ತನ್ನ ಭಕ್ತರಿಗೆ ಅವರು ಬಯಸಿದ ವರಗಳನ್ನು ನೀಡುತ್ತಾಳೆ ಎಂಬುದು ನಂಬಿಕೆ,  

ವರಮಹಾಲಕ್ಷ್ಮಿ ವ್ರತ ಅಥವಾ ವರಲಕ್ಷ್ಮಿ ಹಬ್ಬವು ಶ್ರಾವಣ ಮಾಸದಲ್ಲಿ (ಜುಲೈ-ಆಗಸ್ಟ್) ಬರುತ್ತದೆ. ವರಲಕ್ಷ್ಮಿ ವ್ರತವು ಶ್ರಾವಣದ 2 ನೇ ಶುಕ್ರವಾರ ಅಥವಾ ಹುಣ್ಣಿಮೆಯ (ಪೂರ್ಣಿಮಾ) ಹಿಂದಿನ ಮಧ್ಯಾಹ್ನ ಸಾಮಾನ್ಯವಾಗಿ ಇರುತ್ತದೆ.

 ಈ ಸಂದರ್ಭದಲ್ಲಿ ಉಪವಾಸವನ್ನು ಆಚರಿಸಿ, ತಾಯಿ ವರಲಕ್ಷ್ಮಿ ಪೂಜೆಯನ್ನು ಮಾಡಿದರೆ ಲಕ್ಷ್ಮಿದೇವಿ ತಾನಾಗೇ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ. ಅಷ್ಟಲಕ್ಷ್ಮಿ ಅಥವಾ ಲಕ್ಷ್ಮಿಯ 8 ರೂಪಗಳ ಅನುಗ್ರಹವನ್ನು ಪಡೆಯಲು ಈ ವ್ರತ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಲಕ್ಷ್ಮಿಯ 8 ರೂಪಗಳೆಂದರೆ ಆದಿ ಲಕ್ಷ್ಮಿ ಅಥವಾ ಮಹಾಲಕ್ಷ್ಮಿ, ಧನ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ಗಜ ಲಕ್ಷ್ಮಿ, ಸಂತಾನ ಲಕ್ಷ್ಮಿ,   ಧೈರ್ಯ ಲಕ್ಷ್ಮಿ, ವಿಜಯ ಲಕ್ಷ್ಮಿ, ವಿದ್ಯಾ ಲಕ್ಷ್ಮಿ. ಇನ್ನು ಈ ಅಷ್ಟಲಕ್ಷ್ಮೀಯರು ಈ ಬಾರಿ ವರಮಹಾಲಕ್ಷ್ಮಿ ವ್ರತದಂದು 3 ರಾಶಿಯವರಿಗೆ ಸಕಲ ಸಂಪತ್ತನ್ನು ಧಾರೆ ಎರೆಯುತ್ತಾರೆ ಎಂದು ಹೇಳಲಾಗಿದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಈ ಬಾರಿಯ ವರಲಕ್ಷ್ಮಿ ವ್ರತವು ಸಾಕಷ್ಟು ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ, ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಸಮಾಜದಲ್ಲಿ ನೀವು ಹೆಚ್ಚು ಗೌರವಾನ್ವಿತರಾಗುವಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಹಣಕಾಸಿನ ಲಾಭದ ಸಾಧ್ಯತೆಗಳಿವೆ.

ಸಿಂಹ: ಸಿಂಹ ರಾಶಿಯವರಿಗೆ ಈ ತಿಂಗಳು ಸಾಕಷ್ಟು ಮಂಗಳಕರವಾಗಿರುತ್ತದೆ. ಜೊತೆಗೆ ಆರ್ಥಿಕ ಜೀವನವು ಶ್ರೀಮಂತವಾಗಿರುತ್ತದೆ ಮತ್ತು ಸಮಾಜದಲ್ಲಿ ಗೌರವ ಸಿಗಲಿದೆ. ಉತ್ತಮ ಲಾಭವನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಬಡ್ತಿ ಜೊತೆ ದೊಡ್ಡ ಜವಾಬ್ದಾರಿ ಹೆಗಲೇರಲಿದೆ.

ತುಲಾ: ವರಲಕ್ಷ್ಮಿ ವ್ರತವು ಈ ರಾಶಿಗೆ ಆರ್ಥಿಕ ಲಾಭವನ್ನು ನೀಡಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು ಮತ್ತು ಬಡ್ತಿಯ ಸಾಧ್ಯತೆಯಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link