Varthur Santhosh Tanisha Marriage: ತನಿಷಾ ಕುಪ್ಪಂಡ ಜೊತೆ ವರ್ತೂರು ಸಂತೋಷ್ ಮದುವೆ... ರಿವೀಲ್ ಆಗೇ ಬಿಡ್ತು ಬಿಗ್ ಸೀಕ್ರೇಟ್ !
ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಮದುವೆ ಆಗಬೇಕು ಎಂದು ಅನೇಕ ಜನರು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.
ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಇಬ್ಬರೂ ಮದುವೆಯಾಗಬೇಕೆಂಬುದು ಕೆಲವು ಅಭಿಮಾನಿಗಳ ಆಸೆ ಆಗಿದೆ. ಹಲವು ಸಂದರ್ಭಗಳಲ್ಲಿ ವರ್ತೂರು ತನಿಷಾ ಒಟ್ಟಾಗಿಯೇ ಕಾಣಿಸಿಕೊಂಡಿದ್ದು ಇವರಿಬ್ಬರ ನಡುವೆ ಏನೋ ನಡೀತಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.
ತನಿಷಾ ಜೊತೆಗಿನ ಮದುವೆ ವಿಚಾರವಾಗಿ ಇದೀಗ ವರ್ತೂರು ಸಂತೋಷ್ ಮಾತನಾಡಿದ್ದಾರೆ. ಜನರ ಅಭಿಪ್ರಾಯಕ್ಕೆ ನಾವು ಗೌರವ ಕೊಡಬೇಕು ಎಂದು ಹೇಳಿದ್ದಾರೆ.
ಆದರೆ ನನ್ನ ಮತ್ತು ತನಿಷಾ ಮದುವೆ ಸಾಧ್ಯವಿಲ್ಲ. ನಮ್ಮದು ಅವಿಭಕ್ತ ಕುಟುಂಬವಾದ್ದರಿಂದ ಅಲ್ಲಿ ಸಂಪ್ರದಾಯಗಳು ಜಾಸ್ತಿ ಎಂದು ವರ್ತೂರು ಹೇಳಿದ್ದಾರೆ.
ಸ್ನೇಹಕ್ಕೆ ಬೆಲೆ ಕಟ್ಟೋಕೆ ಯಾರಿಂದಲೂ ಸಾಧ್ಯವಿಲ್ಲ. ವೈಯಕ್ತಿಕ ಜೀವನ ಸಾರ್ವಜನಿಕ ಜೀವನದ ನಡುವೆ ದೊಡ್ಡ ವ್ಯತ್ಯಾಸ ಇದೆ. ಹಿರಿಯರ ತೀರ್ಮಾನಕ್ಕೆ ನಾನು ಕಟ್ಟುಬಿದ್ದಿರುವೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.