ಗಜಕೇಸರಿ ಯೋಗದಿಂದ ಈ ಜನ್ಮರಾಶಿಗೆ ರಾಜವೈಭೋಗ: ಇವರಿಗಿನ್ನಿಲ್ಲ ಸೋಲಿನ ಚಿಂತೆ, ಸಾಲು ಸಾಲು ಯಶಸ್ಸಿನದ್ದೇ ಆಟ!
ವಸಂತ ಪಂಚಮಿಯಂದು ರೇವತಿಯೊಂದಿಗೆ ಅಶ್ವಿನಿ ನಕ್ಷತ್ರದ ಕಾಕತಾಳೀಯವಿದೆ. ಇದಲ್ಲದೇ ಶುಭ, ರವಿ ಯೋಗ, ಶುಕ್ರ-ಕುಜ-ಬುಧಗಳ ಸಂಯೋಗದಿಂದ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಅಷ್ಟೇ ಅಲ್ಲದೆ, ವಸಂತ ಪಂಚಮಿಯ ದಿನದಂದು ಸಂಪತ್ತು ತರುವ ಗಜಕೇಸರಿ ರಾಜಯೋಗವೂ ರೂಪುಗೊಳ್ಳುತ್ತಿದೆ.
ಮೇಷ ರಾಶಿಯಲ್ಲಿ ಚಂದ್ರ ಮತ್ತು ಗುರುಗಳ ಸಂಯೋಗದಿಂದ ಗಜಕೇಸರಿ ಯೋಗವು ರೂಪುಗೊಳ್ಳುತ್ತಿದೆ. ಈ ಮಹಾ ಕಾಕತಾಳೀಯ ಸಂಭವಿಸುವುದರಿಂದ ಕೆಲ ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ.
ಮೇಷ ರಾಶಿ: ವಸಂತ್ ಪಂಚಮಿಯ ದಿನ ರೂಪುಗೊಂಡ ಗಜಕೇಸರಿ ರಾಜಯೋಗವು ಮೇಷ ರಾಶಿಯವರಿಗೆ ಅನೇಕ ಅವಕಾಶಗಳನ್ನು ನೀಡಲಿದೆ. ಈ ದೈವಿಕ ಯೋಗದ ಪ್ರಭಾವದಿಂದಾಗಿ ವೃತ್ತಿಜೀವನವು ವರ್ಧಿಸುತ್ತದೆ. ಉದ್ಯೋಗದಲ್ಲಿ ಬಡ್ತಿಯೊಂದಿಗೆ, ಹಣ ಮತ್ತು ಸ್ಥಾನ ಎರಡೂ ಹೆಚ್ಚಾಗುತ್ತದೆ. ಪೋಷಕರ ಬೆಂಬಲವು ಮನೆಯಲ್ಲಿ ಸಂತೋಷವನ್ನು ತರುತ್ತದೆ.
ಮಿಥುನ ರಾಶಿ: ಈ ರಾಶಿಯ ಹನ್ನೊಂದನೇ ಮನೆಯಲ್ಲಿ ಗಜಕೇಸರಿ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಇವರಿಗೆ ಇನ್ಮುಂದೆ ಹಣಕಾಸಿನ ಸಮಸ್ಯೆ ಕಾಡುವುದಿಲ್ಲ. ವೃತ್ತಿ ಕ್ಷೇತ್ರದಲ್ಲಿ ಅಪಾರ ಯಶಸ್ಸು ಮತ್ತು ಆರ್ಥಿಕ ಲಾಭವನ್ನು ಸಹ ಪಡೆಯಬಹುದು. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಪ್ರಯೋಜನಗಳನ್ನು ಪಡೆಯುವ ಸಂಪೂರ್ಣ ಅವಕಾಶಗಳಿವೆ.
ಧನು ರಾಶಿ: ಈ ರಾಶಿಯ ಐದನೇ ಮನೆಯಲ್ಲಿ ಗಜಕೇಸರಿ ರಾಜಯೋಗ ರಚನೆಯಾಗುತ್ತಿದೆ. ಹೀಗಾಗಿ ಈ ಜನರ ಆರ್ಥಿಕ ಸ್ಥಿತಿಯು ಕ್ರಮೇಣ ಸುಧಾರಿಸಬಹುದು. ಕೌಟುಂಬಿಕ ಸಮಸ್ಯೆಗಳು ಸಹ ಕೊನೆಗೊಳ್ಳಲಿದೆ. ಈ ಜನರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ.
ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ