Vasanta Panchami 2024 ದಿನ ಲಕ್ಷ್ಮಿ ನಾರಾಯಣ ಸೇರಿದಂತೆ ಐದು ದಿವ್ಯ ಯೋಗಗಳ ರಚನೆ, ಈ ಜನರ ಮೇಲೆ ಕೃಪೆ ತೋರಲಿದ್ದಾಳೆ ತಾಯಿ ಲಕುಮಿ!
ಇನ್ನೊಂದೆಡೆ ಗ್ರಹಗಳ ಸ್ಥಿತಿಗತಿ ಕುರಿತು ಹೇಳುವುದಾದರೆ, ಶನಿ ಅಧಿಪತ್ಯದ ರಾಶಿಯಾಗಿರುವ ಮಕರ ರಾಶಿಯಲ್ಲಿ ಮಂಗಳ, ಶುಕ್ರ ಹಾಗೂ ಬುಧರ ಮೈತ್ರಿಯಿಂದ ತ್ರಿಗ್ರಹಿ ಯೋಗ ರಚನೆಯಾಗುತ್ತಿದೆ. ಇದಲ್ಲದೆ ಮೇಷ ರಾಶಿಯಲ್ಲಿ ಚಂದ್ರ ಹಾಗೂ ದೇವಗುರು ಬೃಹಸ್ಪತಿಯ ಮೈತ್ರಿಯಿಂದ ಗಜಕೇಸರಿ ರಾಜಯೋಗ ರಚನೆಯಾಗುತ್ತಿದೆ ಮತ್ತು ಮಕರ ರಾಶಿಯಲ್ಲಿ ಮಂಗಳ ಹಾಗೂ ಶುಕ್ರರ ಮೈತ್ರಿಯಿಂದ ಧನಶಕ್ತಿ ರಾಜಯೋಗ ರಚನೆಯಾಗುತ್ತಿದೆ, ಶುಕ್ರ ಹಾಗೂ ಬುಧರ ಮೈತ್ರಿಯಿಂದ ಲಕ್ಷ್ಮಿ ನಾರಾಯಣ ಯೋಗ ಕೂಡ ರಚನೆಯಾಗುತ್ತಿದ್ದು, ಮಂಗಳ ತನ್ನ ಉಚ್ಚತಮ ರಾಶಿಯಾಗಿರುವ ಮಕರ ರಾಶಿಯಲ್ಲಿರುವ ಕಾರಣ ರುಚಕ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಪಂಚ ಮಹಾಪುರುಷ ರಾಜಯೋಗಗಳಲ್ಲಿ ರುಚಕ ರಾಜಯೋಗ ಕೂಡ ಒಂದು. ವಸಂತ ಪಂಚಮಿಯ ದಿನ ಏಕಕಾಲಕ್ಕೆ ಇಷ್ಟೆಲ್ಲಾ ಶುಭ ಯೋಗಗಳ ಕಾಕತಾಳೀಯದಿಂದ ಕೆಲ ರಾಶಿಗಳ ಜನರ ಮೇಲೆ ಅದೃಷ್ಟ ಲಕ್ಷ್ಮಿಯ ವಿಶೇಷ ಕೃಪೆ ಇರಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಮೇಷ ರಾಶಿ: ಮೇಷ ರಾಶಿಯ ಜಾತಕದವರಿಗೆ ಈ ಐದು ದಿವ್ಯ ಪಂಚಯೋಗಗಳು ಒಂದು ವರದಾನ ಎಂದರೆ ತಪ್ಪಾಗಲಾರದು, ಇದರಿಂದ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿ ಅಪಾರ ಖುಷಿ ಸಿಗಲಿದೆ. ನೌಕರಿಯ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ನಿಮ್ಮ ಪರಿಶ್ರಮ ಹಾಗೂ ಏಕಾಗ್ರತೆಯನ್ನು ನೋಡಿ ಉನ್ನತ ಅಧಿಕಾರಿಗಳು ನಿಮ್ಮ ಮೇಲೆ ಪ್ರಸನ್ನರಾಗಲಿದ್ದಾರೆ. ನೀವು ನಿಮ್ಮ ಮಾತಿನಿಂದ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುವಿರಿ. ಹಿರಿಯರ ಹಾಗೂ ತಂದೆ-ತಾಯಿಯರ ಆಶೀರ್ವಾದದಿಂದ ಜೀವನದಲ್ಲಿ ಖುಷಿಗಳೇ ಖುಷಿಗಳು ಆಗಮಿಸಲಿವೆ. ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಲಿದೆ. ಇದಲ್ಲದೆ ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಧನ-ಧಾನ್ಯದಲ್ಲಿ ಹೆಚ್ಚಳ ಉಂಟಾಗಿ, ಕುಟುಂಬ ಸದಸ್ಯರ ಜೊತೆಗೆ ಕ್ವಾಲಿಟಿ ಟೈಮ್ ಕಳೆಯುವಿರಿ.
ಮಿಥುನ ರಾಶಿ: ಮಿಥುನ ರಾಶಿಯ ಜಾತಕದವರ ಪಾಲಿಗೆ ಈ ಮಹಾಯೋಗ ಅದ್ಭುತ ಸಾಬೀತಾಗಲಿದೆ. ಬಾಳಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಅಪಾರ ಲಾಭದ ಸಂಕೇತಗಳಿವೆ. ಬಿಸ್ನೆಸ್ ನಲ್ಲಿ ದೊಡ್ಡ ಪ್ರಾಜೆಕ್ಟ್ ನಿಮ್ಮ ಕೈಸೇರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಅಪಾರ ಧನ-ಸಂಪತ್ತು ಗಳಿಕೆಯ ಅವಕಾಶ ಸಿಗಲಿದೆ. ವೈವಾಹಿಕ ಜೀವನ ಕೂಡ ಸುಖಮಯವಾಗಿರಲಿದೆ. ತಾಯಿ ಲಕ್ಷ್ಮಿಯ ಆಶೀರ್ವಾದದಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
ಮಕರ ರಾಶಿ: ಮಕರ ರಾಶಿಯ ಜಾತಕದವರಿಗೆ ಈ ದಿವ್ಯ ಪಂಚ ಯೋಗಗಳು ಸಾಕಷ್ಟು ಲಾಭವನ್ನು ತಂದುಕೊಡಲಿವೆ. ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ಈ ರಾಶಿಗಳ ಜನರ ಕಾರ್ಯಗಳು ಪೂರ್ಣಗೊಳ್ಳಲಿವೆ. ಇದಲ್ಲದೆ ನಿಮ್ಮ ಧನ-ಧಾನ್ಯದಲ್ಲಿ ಅಪಾರ ಹೆಚ್ಚಳ ಸಂಭವಿಸುವ ಸಂಕೇತಗಳಿವೆ. ಈ ಅವಧಿಯಲ್ಲಿ ನೀವು ಸಾಕಷ್ಟು ಹಣ ಉಳಿತಾಯ ಮಾಡುವಿರಿ ಮತ್ತು ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ಹೆಚ್ಚಳವನ್ನು ನೀವು ಕಾಣಬಹುದು. ಇದಕ್ಕಾಗಿ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ನೌಕರಿಯಲ್ಲಿ ಪ್ರಮೋಷನ್ ಹಾಗೂ ಆಪ್ರೇಸಲ್ ಸಂಕೇತಗಳು ಕೂಡ ಕಾಣಿಸುತ್ತಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)