ಮನೆಯಲ್ಲಿ ವಾಸ್ತು ದೋಷದ ಸೂಚನೆ ನೀಡುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇಲ್ಲವೇ ಭಾರೀ ನಷ್ಟ!
ಕೆಲವು ಚಿಹ್ನೆಗಳು ಮನೆಯಲ್ಲಿ ವಾಸ್ತು ದೋಷವಿದೆ ಎಂಬುದನ್ನೂ ಸೂಚಿಸುತ್ತವೆ.
ಇಂತಹ ಸಂದರ್ಭದಲ್ಲಿ ವಾಸ್ತು ದೋಷ ನಿವಾರಣೆಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದರೆ ಇದು ಭಾರೀ ನಷ್ಟಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ.
ಮನೆಯಲ್ಲಿ ಎಷ್ಟೇ ಪೋಷಿಸಿದರೂ ಗಿಡ ಹಸಿರಾಗುವ ಬದಲು ಒಣಗುತ್ತಿದ್ದರೆ ಇದು ವಾಸ್ತು ದೋಷವಿರಬಹುದು ಎಂದರ್ಥ.
ಪದೇ ಪದೇ ಕುಟುಂಬ ಸದಸ್ಯರ ಆರೋಗ್ಯ ಹದಗೆಡುತ್ತಿದ್ದರೆ ಇದು ಸಹ ವಾಸ್ತು ದೋಷದ ಎಚ್ಚರಿಕೆಯ ಗಂಟೆಯಾಗಿದೆ.
ಎಷ್ಟೇ ಕಠಿಣ ಪರಿಶ್ರಮದ ಹೊರತಾಗಿಯೂ ಉದ್ಯೋಗ ಜೀವನದಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ ಇದಕ್ಕೆ ಮನೆಯ ವಾಸ್ತು ದೋಷ ಕಾರಣ.
ವಿನಾಕಾರಣ ಮಾನಸಿಕ ತೊಂದರೆಗಳು ನಿಮ್ಮನ್ನು ಬಾಧಿಸುತ್ತಿದ್ದರೆ, ದೀರ್ಘ ಸಮಯ ಇದು ಮುಂದುವರೆದರೆ ಇದನ್ನು ವಾಸ್ತು ದೋಷದ ಸೂಚನೆ ಎಂದು ಪರಿಗಣಿಸಲಾಗುತ್ತದೆ.
ಮನೆಯಲ್ಲಿ ಸದಾ ಒಂದಿಲ್ಲೊಂದು ಎಲೆಕ್ಟ್ರಾನಿಕ್ ಸಾಧನಗಳು ಹಾಳಾಗುತ್ತಿದ್ದರೆ(ಕೆಟ್ಟು ಹೋಗುವುದು) ವಾಸ್ತು ದೋಷದ ಸಂಕೇತ ಎನ್ನಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.