ಮನೆಯಲ್ಲಿ ಈ ನಿಯಮಗಳನ್ನು ಪಾಲಿಸಿದರೆ ಸದಾ ಇರುತ್ತೆ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಆಶೀರ್ವಾದ
ವಾಸ್ತು ನಿಯಮಗಳನ್ನು ಅನುಸರಿಸುವ ಮನೆಯಲ್ಲಿ ಸುಖ-ಶಾಂತಿಗೆ ಕೊರತೆ ಇರುವುದಿಲ್ಲ. ಅಷ್ಟೇ ಅಲ್ಲ, ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಅಂತಹ ಮನೆಯಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.
ಸ್ವಚ್ಛತೆ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ಪ್ರವೇಶಿಸುತ್ತಾಳೆ. ಇಂತಹ ಕಡೆ ಸದಾ ಧನಾತ್ಮಕತೆ ತುಂಬಿರುತ್ತದೆ.
ಮನೆಯ ಪೂರ್ವ ದಿಕ್ಕಿನಲ್ಲಿ ಉದಯಿಸುವ ಸೂರ್ಯನ ಚಿತ್ರ ಹಾಕುವುದರಿಂದ ಅದೃಷ್ಟ ಬರುತ್ತದೆ. ಅಂತಹ ಮನೆಯಲ್ಲಿ ಸುಖ-ಸಂತೋಷಕ್ಕೆ ಕೊರತೆ ಇರುವುದಿಲ್ಲ.
ವಾಸ್ತು ಪ್ರಕಾರ, ಅಡುಗೆ ಮನೆಯ ಮೂಲೆಯಲ್ಲಿ ನೀರು ತುಂಬಿದ ತಾಮ್ರದ ಕೊಡ ಇಡುವುದರಿಂದ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆಯಾಗುವುದಿಲ್ಲ. ಆದರೆ, ನಿತ್ಯ ಆ ನೀರನ್ನು ಬದಲಾಯಿಸಬೇಕು.
ಯಾವ ಮನೆಯಲ್ಲಿ ತುಳಸಿ ಸಸ್ಯ ಇಡಲಾಗುವುದೋ ಆ ಮನೆಯಲ್ಲಿ ಸಂಪತ್ತಿನ ಲಕ್ಷ್ಮಿ ಪ್ರವೇಶಿಸುತ್ತಾಳೆ. ಇಂತಹ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆಯಾಗುವುದಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.