Tulsi Vastu Tips: ಈ ದಿನ ತಪ್ಪಿಯೂ ತುಳಸಿಗೆ ನೀರು ಹಾಕಬೇಡಿ, ಬದುಕಿನ ಸುಖ ನಾಶವಾಗಿ.. ಕೋಟ್ಯಾಧಿಪತಿಯೂ ಕೂಡ ದಾರಿದ್ರ್ಯ ವಕ್ಕರಿಸಿ ಕಡು ಬಡವನಾಗುವ!
ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನ ನೀಡಲಾಗಿದೆ. ತುಳಸಿ ಭಾರತದ ಪ್ರತಿಯೊಂದು ಮನೆಯಲ್ಲೂ ಕಂಡುಬರುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿಯನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡವಿರುವ ಮನೆಯು ಲಕ್ಷ್ಮಿ ವಿಷ್ಣುವಿನ ಆಶೀರ್ವಾದದಲ್ಲಿ ಉಳಿಯುತ್ತದೆ ಎಂದು ನಂಬಲಾಗಿದೆ.
ಧಾರ್ಮಿಕ ದೃಷ್ಟಿಕೋನದಿಂದ ತುಳಸಿ ಗಿಡವನ್ನು ಪೂಜಿಸುವುದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ.
ತುಳಸಿ ಗಿಡಗಳಿಗೆ ನಿತ್ಯ ನೀರು ಅರ್ಪಿಸುವವರೂ ಇದ್ದಾರೆ. ಆದರೆ ಕೆಲವು ದಿನಗಳಂದು ತುಳಸಿ ಗಿಡಕ್ಕೆ ನೀರು ಹಾಕುವುದನ್ನು ನಿಷೇಧಿಸಲಾಗಿದೆ.
ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರನ್ನು ಅರ್ಪಿಸಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ತುಳಸಿಯನ್ನು ಮುಟ್ಟುವುದನ್ನೂ ಸಹ ನಿಷೇಧಿಸಲಾಗಿದೆ.
ತುಳಸಿಗೆ ಭಾನುವಾರ ಮತ್ತು ಏಕಾದಶಿ ದಿನ ನೀರು ಹಾಕಿದರೆ ಅಥವಾ ಮುಟ್ಟಿದರೆ ವ್ಯಕ್ತಿಯು ಪಾಪದ ಹೊರೆ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.
ಧಾರ್ಮಿಕ ಗ್ರಂಥಗಳ ಪ್ರಕಾರ ಭಾನುವಾರ ಮತ್ತು ಏಕಾದಶಿಯಂದು ತುಳಸಿ ಮಾತೆಯು ಭಗವಾನ್ ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ.
ಈ ದಿನ ತುಳಸಿಗೆ ನೀರು ಅರ್ಪಿಸಿದರೆ ಉಪವಾಸವು ಮುರಿದು ಹೋಗುತ್ತದೆ. ಇದರಿಂದ ಮನೆಯಲ್ಲಿ ಕಲಹಗಳು ಹೆಚ್ಚುತ್ತವೆ. ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಬಡತನ ವಕ್ಕರಿಸಲು ಆರಂಭಿಸುತ್ತದೆ.
ತುಳಸಿಗೆ ಈ ಎರಡು ದಿನದಂದು ತಪ್ಪಿಯೂ ನೀರು ಹಾಕಬೇಡಿ. ಶ್ರೀಮಂತನೂ ಕೂಡ ದಾರಿದ್ರ್ಯ ವಕ್ಕರಿಸಿ ಕಡು ಬಡವನಾಗುತ್ತಾನೆ.
ಭಾನುವಾರ ಮತ್ತು ಏಕಾದಶಿ ದಿನ ತುಳಸಿ ಎಲೆಗಳನ್ನು ಕತ್ತರಿಸಲೂ ಬಾರದು. ಇದರಿಂದ ವಿಷ್ಣುವಿನ ಕೋಪಕ್ಕೆ ಗುರಿಯಾಗುವಿರಿ. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)