ಮನೆಯ ಯಾವ ದಿಕ್ಕಿನಲ್ಲಿ ಪೂರ್ವಜರ ಫೋಟೋಗಳನ್ನು ಇಡಬೇಕು? ಬಡತನದಿಂದ ಪಾರಾಗಲು ಇಂದೇ ಈ ಕೆಲಸ ಮಾಡಿ!
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ದಿಕ್ಕಿನಲ್ಲೂ ಸರಿಯಾದ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಸುಖ-ಸಮೃದ್ಧಿಯೂ ಇರುತ್ತದೆ, ಮನೆಯವರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ತಪ್ಪು ದಿಕ್ಕಿನಲ್ಲಿ ಇರಿಸಿದರೆ, ನಕಾರಾತ್ಮಕತೆ, ಬಡತನ ಮತ್ತು ರೋಗಗಳು ಸುತ್ತುವರೆಯುತ್ತವೆ. ಪೂರ್ವಜರ ಫೋಟೋಗಳನ್ನು ಇಡುವ ಸರಿಯಾದ ದಿಕ್ಕನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಪಿತೃ ಪಕ್ಷ ಸೆಪ್ಟೆಂಬರ್ 17ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 2ರವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ಮೃತ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಮನೆಯಲ್ಲಿ ಶ್ರಾದ್ಧ, ತರ್ಪಣ ಮೊದಲಾದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಾರೆ. ಈ ಸಮಯದಲ್ಲಿ ಕೆಲವು ನಿಯಮಗಳನ್ನು ನೆನಪಿನಲ್ಲಿಡಿ.
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಜರ ಚಿತ್ರಗಳನ್ನು ಇಡಲು ದಕ್ಷಿಣ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ದಕ್ಷಿಣ ದಿಕ್ಕು ಯಮ ದಿಕ್ಕು. ಇಹಲೋಕ ತ್ಯಜಿಸಿದ ಪೂರ್ವಜರ ಚಿತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಬೇಕು.
ಪೂಜಾ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ನೀವು ಪೂರ್ವಜರ ಫೋಟೋಗಳನ್ನು ಹಾಕಬಾರದು. ಒಂದು ವೇಳೆ ಹೀಗೆ ಮಾಡಿದ್ರೆ ನಿಮಗೆ ದೊಡ್ಡ ಮಟ್ಟದ ನಷ್ಟ ಉಂಟಾಗಲಿದೆ, ನಿಮ್ಮ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಸುಖ-ಸಂತೋಷದಿಂದ ಕೂಡಿದ ಮನೆಯಲ್ಲಿ ದುಃಖದ ಛಾಯೆ ಮೂಡಲಿದೆ.
ನಿಮ್ಮ ಪೂರ್ವಜರ ಫೋಟೋ ಹಳೆಯದಾಗಿದ್ದರೂ, ಅದನ್ನು ಉತ್ತಮ ಚೌಕಟ್ಟಿನಲ್ಲಿ ರೂಪಿಸಬೇಕು. ಅಲ್ಲದೆ ಫೋಟೋಗೆ ಹಾಕುವ ಮಾಲೆ ಕೂಡ ಸ್ವಚ್ಛವಾಗಿರಬೇಕು ಮತ್ತು ಉತ್ತಮ ಸ್ಥಿತಿಯಲ್ಲಿರಬೇಕು. ಫೋಟೋಗೆ ಯಾವುದೇ ಕಾರಣಕ್ಕೂ ಹಾನಿಗೊಳಗಾದ ಹಾರವನ್ನು ಹಾಕಬಾರದು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪೂರ್ವಜರ ಫೋಟೋಗಳನ್ನು ಹೆಚ್ಚು ಹಾಕಬಾರದು. ಪೂರ್ವಜರ ಒಂದು ಫೋಟೋ ಇದ್ದರೆ ಸಾಕು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)