ದುಡ್ಡನ್ನು ಅಯಸ್ಕಾಂತದಂತೆ ಆಕರ್ಷಿಸುತ್ತೆ ಈ ಪುಟ್ಟ ಸಸ್ಯ: ಸೂರ್ಯನ ಬೆಳಕಿಲ್ಲದೆ, ಕಡಿಮೆ ನೀರಿನಲ್ಲಿ ಬೆಳೆಸಬಹುದಾದ ಗಿಡವಿದು
ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುವ ಕೆಲವೊಂದು ಸಸ್ಯಗಳಿವೆ. ಅಂದರೆ ನೀವು ಇರುವ ಜಾಗದಲ್ಲಿ ಈ ಗಿಡ ಇದ್ದರೆ ಆರ್ಥಿಕ ಸಮಸ್ಯೆ ಎದುರಾಗೋದಿಲ್ಲ.
ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರ ಬಹಳ ಮುಖ್ಯ. ವಾಸ್ತು ಶಾಸ್ತ್ರದಲ್ಲಿ ಅನೇಕ ಸಸ್ಯಗಳ ಬಗ್ಗೆ ಉಲ್ಲೇಖವಿದೆ. ಕೆಲವು ಸಸ್ಯಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಕ್ರಾಸ್ಸುಲಾ ಎಂಬ ಸಸ್ಯವು ಹಣವನ್ನು ಆಕರ್ಷಿಸುವ ಗುಣವನ್ನು ಹೊಂದಿದೆ ಎಂದು ವಾಸ್ತು ಶಾಸ್ತ್ರ ತಜ್ಞರು ಹೇಳುತ್ತಾರೆ. ಈ ಸಸ್ಯವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಜೇಡ್ ಪ್ಲಾಂಟ್, ಲಕ್ಕಿ ಪ್ಲಾಂಟ್, ಫ್ರೆಂಡ್ ಶಿಪ್ ಟ್ರೀ, ಮನಿ ಟ್ರೀ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಕ್ರಾಸ್ಸುಲಾ ಒಂದು ಒಳಾಂಗಣ ಸಸ್ಯವಾಗಿರುವುದರಿಂದ, ಈ ಸಸ್ಯಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಅಲ್ಲದೆ, ಪ್ರತಿದಿನ ನೀರು ಹಾಕುವ ಅಗತ್ಯವಿಲ್ಲ. ಈ ಸಸ್ಯವು ಸೂರ್ಯನ ಬೆಳಕು ಇಲ್ಲದೆ ಸುಲಭವಾಗಿ ಬೆಳೆಯುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಕ್ರಾಸ್ಸುಲಾ ಸಸ್ಯವು ಮನೆಯಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ಮನೆ ಮಾತ್ರವಲ್ಲದೆ, ಕಚೇರಿ ಅಥವಾ ವ್ಯಾಪಾರದ ಯಾವುದೇ ಸ್ಥಳದಲ್ಲಿ ಇರಿಸಬಹುದು. ಈ ಗಿಡ ಎಲ್ಲಿದ್ದರೂ ಹಣದ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಇದೆ.
ಕ್ರಾಸ್ಸುಲಾವನ್ನು ಮುಖ್ಯ ದ್ವಾರದ ಬಲಭಾಗದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ನೀವು ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ, ಕ್ರಾಸ್ಸುಲಾ ಗಿಡವನ್ನು ಉಡುಗೊರೆಯಾಗಿ ನೀಡುವುದು ಅಥವಾ ತೆಗೆದುಕೊಳ್ಳುವುದು ಮಂಗಳಕರ. ಈ ಸಸ್ಯವನ್ನು ಉಡುಗೊರೆಯಾಗಿ ಪಡೆದರೆ ಅದನ್ನು ಒಳ್ಳೆಯ ಶಕುನವೆಂದು ಪರಿಗಣಿಸಿ.
(ಸೂಚನೆ: ಈ ಲೇಖನವು ಸಾರ್ವಜನಿಕ ನಂಬಿಕೆಗಳನ್ನು ಆಧರಿಸಿದೆ. ಜೊತೆಗೆ ಅಂತರ್ಜಾಲದಲ್ಲಿ ಮಾತ್ರ ಲಭ್ಯವಿರುವ ಮಾಹಿತಿಯಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಪರಿಶೀಲಿಸಿಲ್ಲ. ಇದು ಸಂಪೂರ್ಣವಾಗಿ ನಿಜವೆಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.)