Vastu Shastra Tips: ನಿಮ್ಮ ಮನೆಯಲ್ಲಿಯೂ ವಾಸ್ತು ದೋಷವಿದೆಯೇ? ಹೀಗೆ ಕಂಡುಹಿಡಿಯಿರಿ
ನೀವು ಎಷ್ಟೇ ಉತ್ತಮವಾಗಿ ಕಾರ್ಯನಿರ್ವಹಿಸಿದರೂ ವ್ಯವಹಾರದಲ್ಲಿ ಯಾವುದೇ ಪ್ರಗತಿ ಇರುವುದಿಲ್ಲ ಅಥವಾ ನಷ್ಟವಿರುತ್ತದೆ. ಇದರಿಂದ ನೀವು ವಾಸಿಸುವ ಮನೆಯಲ್ಲಿ ವಾಸ್ತು ದೋಷವಿರುವ ಸಾಧ್ಯತೆಯಿರುತ್ತದೆ. ವಾಸ್ತು ದೋಷವಿರುವ ಮನೆಯು ನಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ಮನೆಯ ನಿವಾಸಿಗಳ ಆತ್ಮವಿಶ್ವಾಸ ಮತ್ತು ಧೈರ್ಯ ಕಡಿಮೆ ಮಾಡುತ್ತದೆ.
ನಿಮ್ಮ ಮನೆಯ ಸದಸ್ಯರು ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಾರೆಯೇ? ಮನೆಯಲ್ಲಿ ಹಣವಿಲ್ಲವೇ? ಆದಾಯದಲ್ಲಿ ಸುಧಾರಣೆ ಇಲ್ಲವೇ? ಹೀಗಿದ್ದರೆ ನಿಮ್ಮ ಮನೆಯಲ್ಲಿ ವಾಸ್ತು ದೋಷವಿದೆ ಎಂದರ್ಥ.
ನೀವು ವಾಸಿಸುವ ಮನೆ ನಿಮಗೆ ಒಳ್ಳೆಯ ಭಾವನೆ ನೀಡದಿದ್ದರೆ, ಆ ಮನೆಯಲ್ಲಿ ವಾಸ್ತು ದೋಷವಿದೆ ಎಂದರ್ಥ. ನೀವು ಉತ್ತಮ ಆಹಾರ ಸೇವಿಸಿ ಮಲಗಿದರೂ ಚೆನ್ನಾಗಿ ನಿದ್ದೆ ಬರುವುದಿಲ್ಲ. ನಿಮ್ಮ ಮನಸ್ಸು ಸದಾ ಒತ್ತಡದಲ್ಲಿಯೇ ಇರುತ್ತದೆ. ಈ ರೀತಿ ಲಕ್ಷಣಗಳಿದ್ದಲ್ಲಿ ಮನೆಯಲ್ಲಿ ವಾಸ್ತು ದೋಷವಿರುತ್ತದೆ.
ಮನೆಯಲ್ಲಿ ಪ್ರತಿದಿನವೂ ಜಗಳಗಳು ನಡೆಯುತ್ತಿವೆಯೇ? ಇದಕ್ಕೆ ಮುಖ್ಯ ಕಾರಣವೇ ಮನೆಯಲ್ಲಿನ ವಾಸ್ತುದೋಷ. ಇದರಿಂದ ಮನೆಯ ಸದಸ್ಯರ ಮನಸ್ಥಿತಿಯಲ್ಲಿ ಅನಗತ್ಯ ಕಿರಿಕಿರಿ ಉಂಟಾಗಿ ಪರಸ್ಪರ ಜಗಳವಾಡುತ್ತಾರೆ. ಪದೇ ಪದೇ ನಷ್ಟ ಅಥವಾ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಆದರೂ ಸಹ ಮನೆಯಲ್ಲಿ ನೆಗೆಟಿವ್ ಎನರ್ಜಿ ತುಂಬಿದೆ ಎಂದರ್ಥ.
ನಿಮ್ಮ ಜೀವನದಲ್ಲಿ ನಿರಾಸಕ್ತಿ ಮತ್ತು ಹತಾಶೆ-ದುಃಖದಿಂದ ಕೂಡಿದೆಯೇ? ಇದು ಸಹ ವಾಸ್ತುದೋಷದ ಸಂಕೇತ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ವಿವಿಧ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅದನ್ನು ಕಂಡುಹಿಡಿದು ಅದಕ್ಕೆ ಪರಿಹಾರ ಮಾಡಿಕೊಳ್ಳಬೇಕು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)