ಈ ದಿಕ್ಕಿಗೆ ಮುಖ ಮಾಡಿ ಕುಳಿತು ಊಟ ಮಾಡಿದರೆ ಅದೃಷ್ಟ.. ಲಕ್ಷ್ಮೀ ದೇವಿಯ ಕೃಪೆಯಿಂದ ಬಡವನೂ ಸಿರಿವಂತನಾಗುವ !
Eating Rules: ವಾಸ್ತು ಶಾಸ್ತ್ರದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರವಿದೆ. ಮನೆಯ ಪ್ರತಿ ದಿಕ್ಕಿನ ಬಗ್ಗೆ ಮಾಹಿತಿಯಿದೆ. ಯಾವ ದಿಕ್ಕಿಗೆ ಕುಳಿತು ಆಹಾರ ಸೇವಿಸುವುದು ಶುಭ ಎಂದು ತಿಳಿಸಲಾಗಿದೆ. ಊಟ ಮಾಡುವಾಗ ಕೆಲವು ಪ್ರಮುಖ ನಿಯಮಗಳನ್ನು ಅನುಸರಿಸಬೇಕು. ಇದು ಜೀವನದಲ್ಲಿ ಸುಖ ಸಂತೋಷಕ್ಕೆ ಕಾರಣವಾಗುತ್ತದೆ.
ಆಹಾರ ಸೇವನೆಯ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಇದನ್ನು ಅನುಸರಿಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.
ಧರ್ಮಗ್ರಂಥಗಳ ಪ್ರಕಾರ, ಆಹಾರವನ್ನು ಎಂದಿಗೂ ಅವಮಾನಿಸಬಾರದು. ಆಹಾರದ ರುಚಿಯನ್ನು ತೆಗಳಬಾರದು. ದೇವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಊಟವನ್ನು ಸ್ವೀಕರಿಸಬೇಕು.
ಮನೆಯಲ್ಲಿ ಡೀ ಕುಟುಂಬದವರೆಲ್ಲ ಒಟ್ಟಿಗೆ ಕುಳಿತುಕೊಂಡು ಊಟ ಮಾಡವುದು ಮಂಗಳಕರ. ಇದು ಕುಟುಂಬದ ಏಳ್ಗೆಗೆ ಕಾರಣವಾಗುತ್ತದೆ.
ಊಟ ಮಾಡುವಾಗ ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿಗೆ ಮುಖವನ್ನು ಮಾಡಿ ಕುಳಿತುಕೊಳ್ಳಬೇಕು. ಇದು ವ್ಯಕ್ತಿಯೊಳಗಿನ ನಕಾರಾತ್ಮಕ ಭಾವನೆಯನ್ನು ತೆಗೆದು ಹಾಕುತ್ತದೆ.
ವಾಸ್ತು ಶಾಸ್ತ್ರದಲ್ಲಿ, ಆಹಾರವನ್ನು ವ್ಯರ್ಥ ಮಾಡುವುದನ್ನು ಪಾಪಕ್ಕೆ ಸಮಾನವೆಂದು ಹೇಳಲಾಗಿದೆ. ಆಹಾರವನ್ನು ಎಂದಿಗೂ ವೇಸ್ಟ್ ಮಾಡಬಾರದು. ತಟ್ಟೆಯಲ್ಲಿ ಆಹಾರವನ್ನು ಚೆಲ್ಲಬಾರದು ಎನ್ನಲಾಗಿದೆ.
ಊಟದ ನಂತರ ಎಂದಿಗೂ ತಟ್ಟೆಯಲ್ಲಿ ಕೈ ತೊಳೆಯಬಾರದು. ಇದನ್ನು ಮಾಡುವುದರಿಂದ ಮನೆಯಲ್ಲಿ ಬಡತನ ಬರುವುದು. ಸಿರಿವಂತನೂ ಕೂಡ ಕಷ್ಟ ಎದುರಿಸಬೇಕಾಗಬಹುದು.
ಆಹಾರ ಸೇವಿಸುವಾಗ ಎಂದಿಗೂ ಶೌಚಕ್ಕೆ ಹೋಗಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಆಹಾರಕ್ಕೆ ಮಾಡುವ ಅವಮಾನ ಎಂದು ಪರಿಗಣಿಸಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.