ಗಡಿಯಾರವನ್ನು ಈ ದಿಕ್ಕಿನಲ್ಲಿಯೇ ಹಾಕಿ.. ಅಲ್ಲಿಂದ ಶುರುವಾಗುತ್ತೆ ನಿಮ್ಮ ಲಕ್ಕಿ ಟೈಮ್!
wall clock vastu direction : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದಕ್ಕೆ ವಾಸ್ತು ಶಾಸ್ತ್ರದಲ್ಲಿ ಬಹಳಷ್ಟು ಪ್ರಾಮುಖ್ಯತೆಯಿದೆ.
ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಗಡಿಯಾರವನ್ನು ಹಾಕುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕುಟುಂಬ ಸದಸ್ಯರಲ್ಲಿ ಸಕಾರಾತ್ಮಕತೆ ಮತ್ತು ಮಾನಸಿಕ ಶಾಂತಿಯನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ.
ಗಡಿಯಾರವನ್ನು ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ಹಾಕಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.
ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಹಾಕುವುದರಿಂದ ಪ್ರಗತಿಯನ್ನು ನಿಲ್ಲಿಸುತ್ತದೆ. ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.
ಮುರಿದ ಅಥವಾ ಹಾನಿಗೊಳಗಾದ ಗಡಿಯಾರವನ್ನು ತಪ್ಪಾಗಿಯೂ ಮನೆಯಲ್ಲಿ ಇಡಬಾರದು.
ಗಡಿಯಾರಕ್ಕೆ ಧೂಳು ಅಂಟಿಕೊಳ್ಳಬಾರದು. ಇದು ನಮ್ಮ ಕೆಟ್ಟ ಸಮಯದ ಸೂಚನೆ. ಧೂಳು ಅಂಟದಂತೆ ಕಾಲಕಾಲಕ್ಕೆ ಗಡಿಯಾರ ಸ್ವಚ್ಛಗೊಳಿಸಬೇಕು.
ನಿಂತು ಹೋದ ಗಡಿಯಾರ ಪ್ರಗತಿ ಕುಂಠಿತವಾಗುವುದರ ಸಂಕೇತ. ಅದನ್ನು ಮೊದಲು ಮನೆಯಿಂದ ಹೊರಹಾಕಬೇಕು.
ಗಡಿಯಾರದಲ್ಲಿ ಸಮಯ ಹಿಂದೆ ಇರಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಗಡಿಯಾರದ ಸಮಯವನ್ನು ಕೆಲವು ನಿಮಿಷಗಳಷ್ಟು ಮುಂದಕ್ಕೆ ಇಡಬಹುದು. ಇದು ಸಮೃದ್ಧಿಯನ್ನು ತರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಗಡಿಯಾರವನ್ನು ನೀಲಿ, ಕಪ್ಪು, ಕೇಸರಿ ಮತ್ತು ಕೊಳಕು ಗೋಡೆಗಳ ಮೇಲೆ ಇಡಬಾರದು. ಇದರಿಂದ ಆದಾಯದ ಮೇಲೆ ಪರಿಣಾಮ ಬೀರಬಹುದು.
ಕೆಟ್ಟ ಗಡಿಯಾರವನ್ನು ಮನೆಯಲ್ಲಿ ಇಡಬಾರದು. ಮನೆಯ ಮುಖ್ಯ ದ್ವಾರದ ಮೇಲೆ ಗಡಿಯಾರವನ್ನು ಹಾಕಬಾರದು.
ವಾಸ್ತು ಶಾಸ್ತ್ರದ ಪ್ರಕಾರ, ಗಡಿಯಾರವನ್ನು ಉಡುಗೊರೆಯಾಗಿ ನೀಡಬಾರದು. ಇದು ನಿಮ್ಮ ಅದೃಷ್ಟವನ್ನು ಅವರಿಗೆ ಕೊಟ್ಟಂತೆ.
(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)