Vastu shastra: ಪೊರಕೆಯನ್ನು ಯಾವಾಗ ಖರೀದಿಸಬೇಕು? & ಯಾವಾಗ ಖರೀದಿಸಬಾರದು..?
ವಾಸ್ತುಶಾಸ್ತ್ರದ ಪ್ರಕಾರ, ಸೋಮವಾರದಂದು ಪೊರಕೆಯನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು. ಇದರಿಂದ ನಿಮ್ಮ ಧನಾಗಮನದ ವಿಚಾರದಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯುಗಾದಿ ಹಬ್ಬದ ಸೋಮವಾರದಂದು ಅಪ್ಪಿತಪ್ಪಿಯೂ ಪೊರಕೆಯನ್ನು ಖರೀದಿಸಿ ಮನೆಗೆ ತರಬಾರದು. ಈ ರೀತಿ ಮಾಡಿದರೆ ನಿಮ್ಮ ಮೇಲೆ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಖರ್ಚುಗಳು ಹಾಗೂ ಸಾಲದ ಮೊತ್ತ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನೀವು ಸಹ ತಾಯಿ ಲಕ್ಷ್ಮಿದೇವಿಯನ್ನು ಪ್ರಸನ್ನ ಗೊಳಿಸಬೇಕು ಎನ್ನುವಂತಹ ಆಸಕ್ತ ಇದ್ದಲ್ಲಿ ಯಾವತ್ತೂ ಕೂಡ ಸೋಮವಾರದಂದು ಪೊರಕೆಯನ್ನು ಖರೀದಿಸುವ ದುಸ್ಸಾಹಸಕ್ಕೆ ಕೈಹಾಕಬೇಡಿ. ಇದರಿಂದ ನೀವು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.
ಶನಿವಾರದ ದಿನದಂದು ಸಾಮಾನ್ಯವಾಗಿ ಎಣ್ಣೆ ಹಾಗೂ ಲೋಹದ ವಸ್ತುಗಳನ್ನು ಖರೀದಿ ಮಾಡುವುದು ಅಪಶಕುನವೆಂದು ಪರಿಗಣಿಸಲಾಗಿದೆ. ಅದೇ ರೀತಿ ಪೊರಕೆಯನ್ನು ಖರೀದಿ ಮಾಡುವುದು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಶನಿವಾರ ಸಮಸ್ಯೆಗಳನ್ನು ತರಬಹುದಾದಂತಹ ಪರಿಣಾಮವನ್ನು ಉಂಟು ಮಾಡುತ್ತವೆ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ತಾಯಿ ಲಕ್ಷ್ಮಿದೇವಿಯ ಕೃಪಾಕಟಾಕ್ಷವನ್ನು ಹೊಂದಬೇಕೆಂದು ಅನಿದರೆ ಅಪ್ಪಿತಪ್ಪಿಯೂ ಶನಿವಾರದಂದು ಪೊರಕೆ ಖರೀದಿಸಬೇಡಿ. ಹೀಗೆ ಮಾಡಿದ್ರೆ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಕೇವಲ ಲಕ್ಷ್ಮಿದೇವಿಯ ಕೋಪಕ್ಕೆ ಮಾತ್ರವಲ್ಲದೆ ಶನಿಯ ಕೋಪಕ್ಕೆ ಸಹ ನೀವು ಗುರಿಯಾಗುವ ಸಾಧ್ಯತೆ ಇರುತ್ತದೆ.
ಒಂದು ವೇಳೆ ಮನೆಗೆ ಹೊಸ ಪೊರಕೆಯನ್ನು ಖರೀದಿ ಮಾಡಬೇಕು ಎನ್ನುವಂತಹ ಪ್ಲ್ಯಾನ್ ಇದ್ದರೆ ಶುಕ್ರವಾರ ಹಾಗೂ ಮಂಗಳವಾರದ ದಿನದಂದು ಖರೀದಿಸಬೇಕು. ಇದರಿಂದ ತಾಯಿ ಲಕ್ಷ್ಮಿದೇವಿಯ ಕೃಪೆ ನಿಮ್ಮ ಜೀವನದಲ್ಲಿ ಇರುತ್ತದೆ. ಇನ್ನೂ ಅಕ್ಷಯ ತೃತೀಯದ ದಿನದಂದು ಕೂಡ ನೀವು ಪೊರಕೆಯನ್ನು ಖರೀದಿ ಮಾಡುವುದು ಸಾಕಷ್ಟು ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ.
ಒಂದು ವೇಳೆ ನಿಮ್ಮ ಮನೆಯ ವಾಸ್ತುಶಾಸ್ತ್ರದ ಪ್ರಕಾರ ಪ್ರತಿಯೊಂದು ಕೆಲಸಗಳು ಸರಿಯಾಗಿ ನಡೆಯಬೇಕು ಹಾಗೂ ನಿಮ್ಮ ಜೀವನದಲ್ಲಿ ಕೂಡ ಸಮೃದ್ಧಿ ಹೆಚ್ಚಾಗಬೇಕು ಎನ್ನುವಂತಹ ಆಸೆ ಇದ್ದರೆ ನಿಮ್ಮ ಮನೆಯಲ್ಲಿ ಪೊರಕೆಯನ್ನು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ. ಇದರಿಂದ ತಾಯಿ ಲಕ್ಷ್ಮಿದೇವಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ನಿಮ್ಮ ಮನೆಯಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿಗಳು ಕೂಡ ಹೆಚ್ಚಾಗುತ್ತವೆ. ಇದಲ್ಲದೆ ನಕಾರಾತ್ಮಕ ಶಕ್ತಿಗಳು ಮನೆಯಿಂದ ಹೊರ ಹೋಗುತ್ತವೆ. ಆರ್ಥಿಕ ಸಂಕಷ್ಟದ ವಿಚಾರದಲ್ಲಿ ಸಹ ನೀವು ಯಾವುದೇ ಸಮಸ್ಯೆಗಳನ್ನು ಕಾಣುವುದಿಲ್ಲ, ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿವೆ.
ಮನೆಯಲ್ಲಿ ಪೊರಕೆಯನ್ನು ಇರಿಸಲು ಉತ್ತಮವಾದ ದಿಕ್ಕು ವಾಯುವ್ಯ ಅಥವಾ ಪಶ್ಚಿಮ ಮೂಲೆಯಾಗಿದೆ. ಈ ಸ್ಥಳದಲ್ಲಿ ಪೊರಕೆಯನ್ನು ಇರಿಸಿದಾಗ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಆದರೆ ಯಾವಾಗಲೂ ಪೊರಕೆಯನ್ನು ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆಯ ಬಳಿ ಇರಿಸುವುದು ಉತ್ತಮ.