Vastu Tips: ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿನಲ್ಲಿ ಗಡಿಯಾರ ಹಾಕಬೇಕು?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗಡಿಯಾರವನ್ನು ಇರಿಸುವಾಗ ಸರಿಯಾದ ದಿಕ್ಕಿನ ಬಗ್ಗೆ ಜ್ಞಾನ ಹೊಂದಿರುವುದು ಬಹಳ ಮುಖ್ಯ. ಹೀಗೆ ಮಾಡದಿದ್ದರೆ ಸಮೃದ್ಧಿ ಮತ್ತು ಪ್ರಗತಿಗೆ ಅಡಚಣೆಯನ್ನುಂಟುಮಾಡುತ್ತದೆ. ಮನೆಯಲ್ಲಿ ಗಡಿಯಾರವನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಂತೋಷವನ್ನು ತರುತ್ತದೆ.
ಮನೆಯ ಗೋಡೆಗೆ ಲೋಲಕದ ಗಡಿಯಾರವು ತುಂಬಾ ಚೆನ್ನಾಗಿ ಕಾಣುತ್ತದೆ. ಆದ್ದರಿಂದ ಬಹುತೇಕ ಜನರು ಈ ಗಡಿಯಾರಗಳನ್ನು ಮನೆಯಲ್ಲಿ ಇರಿಸಲು ಇಷ್ಟಪಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಲೋಲಕ ಗಡಿಯಾರಗಳನ್ನು ಸ್ಥಾಪಿಸುವುದು ಶುಭವಲ್ಲವಂತೆ. ಇದರಿಂದ ಮನೆಯ ಸುಖ-ಮತ್ತು ನೆಮ್ಮದಿಯ ಮೇಲೆ ದುಷ್ಟ ಕಣ್ಣು ಬೀಳುತ್ತದೆ ಎಂದು ನಂಬಲಾಗಿದೆ.
ಅಪ್ಪಿತಪ್ಪಿಯೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಬಾರದು. ಹೀಗೆ ಮಾಡುವುದರಿಂದ ವಾಸ್ತು ದೋಷಗಳು ಉಂಟಾಗಿ ಆರ್ಥಿಕ ಮುಗ್ಗಟ್ಟಿನ ಸಾಧ್ಯತೆ ಹೆಚ್ಚುತ್ತದೆ. ಅದೇ ರೀತಿ ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದಂತೆ.
ಇತ್ತೀಚಿನ ದಿನಗಳಲ್ಲಿ ವಿವಿಧ ಆಕಾರ ಮತ್ತು ಬಣ್ಣಗಳ ಗಡಿಯಾರಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ವಾಸ್ತುಶಾಸ್ತ್ರದ ಪ್ರಕಾರ ಕಿತ್ತಳೆ ಮತ್ತು ಹಸಿರು ಬಣ್ಣದ ಗಡಿಯಾರವನ್ನು ಮನೆಯಲ್ಲಿ ಅಳವಡಿಸಬಾರದು. ಈ ಬಣ್ಣಗಳ ಗಡಿಯಾರಗಳು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತವಂತೆ.
ಗಡಿಯಾರವನ್ನು ಮನೆಯ ಮುಖ್ಯ ಬಾಗಿಲು ಅಥವಾ ಬಾಗಿಲಿನ ಮೇಲೆ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಯು ಸಂಚರಿಸಲು ಪ್ರಾರಂಭಿಸುತ್ತದೆ ಮತ್ತು ಮನೆಯ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)