Vastu Tips: ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ!

Thu, 21 Mar 2024-9:20 pm,

ಮಲಗುವ ಕೋಣೆಯ ಹಾಸಿಗೆಯ ಕೆಳಗೆ ಅಥವಾ ಪಕ್ಕದಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ. ಇವು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ವ್ಯಕ್ತಿಯ ನಿದ್ರೆಯ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಮೊಬೈಲ್ ವಿಕಿರಣದ ಹಾನಿಕಾರಕ ಪರಿಣಾಮ ತಪ್ಪಿಸಲು ಮೊಬೈಲ್ ಸ್ವಿಚ್ ಆಫ್ ಮಾಡಿ ಅಥವಾ ಏರೋಪ್ಲೇನ್ ಮೋಡ್‌ನಲ್ಲಿ ಇರಿಸಿ. ನಿಮ್ಮ ಮಲಗುವ ಸ್ಥಳದಿಂದ 7 ಅಡಿಗಿಂತಲೂ ಹೆಚ್ಚು ದೂರದಲ್ಲಿ ಮೊಬೈಲ್‌ ಇಡುವುದು ಸೂಕ್ತ. 

ಹೆಚ್ಚಿನ ಮನೆಗಳಲ್ಲಿ ಜನರು ತಮ್ಮ ವಿವಿಧ ರೀತಿಯ ಸಾಮಾನು-ಸರಂಜಾಮುಗಳನ್ನು ಬೇಡ್‌ ಅಥವಾ ಹಾಸಿಗೆಯ ಕೆಳಗೆ ಇಡುತ್ತಾರೆ. ಪಾತ್ರೆಗಳು, ಬಟ್ಟೆಗಳು, ಮನೆಬಳಕೆ ವಸ್ತುಗಳು ಹೀಗೆ ನಾನಾ ರೀತಿಯ ವಸ್ತುಗಳನ್ನು ಇಡಲು ಮಂಚದ ಕೆಳಗಿನ ಜಾಗವನ್ನು ಬಳಸಿಕೊಳ್ಳುತ್ತಾರೆ. ಜಾಗದ ಕೊರತೆಯಿಂದ ಆ ಸ್ಥಳವನ್ನು ಬಳಸಿಕೊಳ್ಳುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಸರಿಯಲ್ಲ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಿಸುತ್ತದೆ. ಮನೆಯ ಸಂತೋಷ, ಸುಖ-ಶಾಂತಿಯನ್ನು ಹಾಳು ಮಾಡುತ್ತದೆ. ಸುಖ ನಿದ್ರೆ ಮಾಡಲು ಮಂಚದ ಕೆಳಗೆ ಚೆನ್ನಾಗಿ ಗಾಳಿಯಾಡಬೇಕು. ಹೀಗಾಗಿ ಹಾಸಿಗೆಯ ಕೆಳಗೆ ಯಾವುದೇ ರೀತಿಯ ವಸ್ತುಗಳನ್ನು ಇಡಬಾರದು.

ಚಿನ್ನ-ಬೆಳ್ಳಿ ಅಥವಾ ಇತರ ಲೋಹದ ವಸ್ತುಗಳನ್ನು ಹಾಸಿಗೆಯ ಕೆಳಗೆ ಅಥವಾ ಪಕ್ಕದಲ್ಲಿ ಇಡಬಾರದು. ಕೆಲವರಿಗೆ ರಾತ್ರಿ ವೇಳೆ ತಾವು ಧರಿಸಿರುವ ಎಲ್ಲಾ ಆಭರಣಗಳನ್ನು ತೆಗೆದಿಟ್ಟು ಮಲುಗುವ ಅಭ್ಯಾಸವಿರುತ್ತದೆ. ಈ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಗಾಜಿನ ವಸ್ತು, ಎಣ್ಣೆ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ಇಡಲೇಬಾರದು. ಇದು ನಿಮಗೆ ಹಾನಿಯನ್ನುಂಟು ಮಾಡುತ್ತದೆ.  

ವಾಸ್ತು ಪ್ರಕಾರ ದಿಂಬಿನ ಕೆಳಗೆ ಪುಸ್ತಕಗಳು, ಪತ್ರಿಕೆಗಳು ಅಥವಾ ನಿಯತಕಾಲಿಕೆಗಳನ್ನು ಇಡಬಾರದು ಎಂದು ಹೇಳಲಾಗುತ್ತದೆ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಮನೆಯಲ್ಲಿ ಶಾಂತಿ-ನೆಮ್ಮದಿ ಇರುವುದಿಲ್ಲ. ಹೀಗಾಗಿ ಈ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ.  

ಬೂಟು ಮತ್ತು ಚಪ್ಪಲಿಗಳನ್ನು ಮಲುಗುವ ಕೋಣೆಗೆ ಅಪ್ಪಿತಪ್ಪಿಯೂ ತರಬಾರದು. ಇವುಗಳನ್ನು ನಿಮ್ಮ ತಲೆಯ ಬಳಿ ಅಥವಾ ಹಾಸಿಗೆಯ ಕೆಳಗೆ ಎಂದಿಗೂ ಇಡಬಾರದು. ಇದು ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link