Vastu Tips: ದಕ್ಷಿಣ ದಿಕ್ಕಿನಲ್ಲಿ ಮರೆತೂ ಕೂಡ ಈ ಸಸ್ಯಗಳನ್ನು ನೆಡಬೇಡಿ, ಹಣಕಾಸಿನ ಮುಗ್ಗಟ್ಟು ಎದುರಾಗುತ್ತದೆ
1, ತುಳಸಿ ಗಿಡ - ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ತುಂಬಾ ಶುಭ. ಇದನ್ನು ಮನೆಯಲ್ಲಿ ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿಯನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಏಕೆಂದರೆ ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಇದನ್ನು ಯಾವಾಗಲೂ ಪೂರ್ವ, ಉತ್ತರ ಅಥವಾ ಪೂರ್ವೋತ್ತರ ದಿಕ್ಕಿನಲ್ಲಿ ನೆಡಬೇಕು.
2. ಶಮಿ ಗಿಡ -ವಾಸ್ತು ಶಾಸ್ತ್ರದ ಪ್ರಕಾರ ಶಮಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ವಾಸ್ತವದಲ್ಲಿ, ಈ ದಿಕ್ಕಿನಲ್ಲಿ ಶಮಿ ಗಿಡವನ್ನು ನೆಡುವುದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಸ್ಯವನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಶಮಿ ಗಿಡವನ್ನು ಈ ದಿಕ್ಕಿನಲ್ಲಿ ನೆಟ್ಟರೆ ವಾಸ್ತು ದೋಷ ನಿವಾರಣೆಯಾಗುತ್ತದೆ.
3. ರೋಸ್ಮರಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ರೋಸ್ಮರಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಸಂಭವಿಸುತ್ತದೆ. ಇದಲ್ಲದೆ, ಈ ಸಸ್ಯವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು.
4. ಮನಿ ಪ್ಲಾಂಟ್ - ವಾಸ್ತು ಶಾಸ್ತ್ರದ ಪ್ರಕಾರ ಮನೆ ಮತ್ತು ಕಛೇರಿಯಲ್ಲಿ ಮನಿ ಪ್ಲಾಂಟ್ ಇಡುವುದು ಶುಭಕರ ಎನ್ನಲಾಗಿದೆ. ಮನಿ ಪ್ಲಾಂಟ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಅಗ್ನಿಕೋನದಲ್ಲಿ (ಅಂದರೆ ಆಗ್ನೇಯ ದಿಕ್ಕಿನಲ್ಲಿ) ಇಡುವುದು ತುಂಬಾ ಶುಭಕರ.
5. ಬಾಳೆಗಿಡ - ಬಾಳೆಗಿಡ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಗಿಡ ಎಂಬ ಧಾರ್ಮಿಕ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇದು ಇರಬಾರದು. ಇದನ್ನು ಈಶಾನ್ಯದಲ್ಲಿ ನೆಡುವುದು ಅತ್ಯಂತ ಸೂಕ್ತ.