Vastu tips: ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿದರೆ, ಮನೆಯಲ್ಲಿ ಸದಾ ತುಂಬಿರುತ್ತೆ ಸಂಪತ್ತು-ಸಂತೋಷ

Wed, 13 Oct 2021-12:50 pm,

ಈ ಸುಲಭ ಕೆಲಸಗಳನ್ನು ಪ್ರತಿದಿನ ಮಾಡಿ: ಮನೆಯಲ್ಲಿ ಯಾವಾಗಲೂ ಸಕಾರಾತ್ಮಕತೆಯನ್ನು ಕಾಯ್ದುಕೊಳ್ಳಲು, ಪ್ರತಿದಿನ ಈ ಪರಿಹಾರಗಳನ್ನು ಮಾಡುವುದು ಅವಶ್ಯಕ. ಈ ಪರಿಹಾರಗಳು ತುಂಬಾ ಸುಲಭ ಮತ್ತು ಅವುಗಳನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 

ಪ್ರತಿದಿನ ಬೆಳಿಗ್ಗೆ ಮನೆಯ ಬಾಗಿಲನ್ನು ತೊಳೆಯಿರಿ: ಪ್ರತಿದಿನ ಬೆಳಿಗ್ಗೆ ಮನೆಯ ಮುಖ್ಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ. ಇದರ ನಂತರ ಮುಖ್ಯ ಬಾಗಿಲಿನ ಹೊಸ್ತಿಲನ್ನು ಒಂದು ಚಿಟಿಕೆ ಅರಿಶಿನ ಬೆರೆಸಿದ ನೀರಿನಿಂದ ತೊಳೆಯಿರಿ. ಇದನ್ನು ಮಾಡುವುದರಿಂದ, ಲಕ್ಷ್ಮಿ ದೇವಿಯು ಸಂತಸಗೊಂಡು ಸಂಪತ್ತನ್ನು ಸುರಿಸುತ್ತಾಳೆ ಎಂದು ಹೇಳಲಾಗುತ್ತದೆ.

ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆ : ಪ್ರತಿದಿನ ಬೆಳಿಗ್ಗೆ ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಿರಿ. ಇದರಿಂದ ಮುಖ್ಯ ಬಾಗಿಲಿನಿಂದ ಧನಾತ್ಮಕ ಶಕ್ತಿಯ ಹರಿವು ಯಾವಾಗಲೂ ಇರುತ್ತದೆ. ಈ ಕಾರಣದಿಂದಾಗಿ, ಮನೆಯಲ್ಲಿ ಎಂದಿಗೂ ಹಣ ಮತ್ತು ಆಹಾರದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Astrology: ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾರೆ ಈ 3 ರಾಶಿಯ ಜನ

ಮನೆಯ ಮುಂದೆ ರಂಗೋಲಿ ಬಿಡಿಸಿ : ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಸಣ್ಣ ರಂಗೋಲಿಗಳನ್ನು ಬಿಡಿಸಿ. ಇದು ಬಹಳ ಮಂಗಳಕರ. ಅಂದಹಾಗೆ, ಈ ಕೆಲಸವನ್ನು ಪ್ರತಿದಿನ ಮಾಡಿ, ಆದರೆ ಅದು ಸಾಧ್ಯವಾಗದಿದ್ದರೆ, ವಾರಕ್ಕೊಮ್ಮೆಯಾದರೂ ಮನೆಯ ಮುಂದೆ ನೀರು ಹಾಕಿ ರಂಗೋಲಿ ಬಿಡಿಸಿ. ಇದರಿಂದ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದನ್ನು ತಡೆಯಬಹುದು ಎಂಬ ನಂಬಿಕೆ ಇದೆ.

ಇದನ್ನೂ ಓದಿ- Sun Transit October 2021: ಅಕ್ಟೋಬರ್ 17 ರಂದು ಸೂರ್ಯನ ರಾಶಿ ಪರಿವರ್ತನೆ, ಈ 5 ರಾಶಿಯವರಿಗೆ ಸಂಕಷ್ಟ

ಕರ್ಪೂರವನ್ನು ಹಚ್ಚಿ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕರ್ಪೂರವನ್ನು ಹಚ್ಚಿ ಅದರ ದೂಪ ಮನೆಯಲ್ಲಿ ಹರಡಿ. ವಾಸ್ತು ಪ್ರಕಾರ, ಸಕಾರಾತ್ಮಕತೆಯನ್ನು ತರಲು ಇದು ಖಚಿತವಾದ ಮಾರ್ಗವಾಗಿದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link