VASTU TIPS FOR BATHROOM: ಬಾತ್ರೂಮ್ ಗೆ ಸಂಬಂಧಿಸಿದ ಈ 5 ವಾಸ್ತು ಸಲಹೆಗಳನ್ನು ಅಪ್ಪಿ-ತಪ್ಪಿಯೂ ಮರೆಯಬೇಡಿ

Mon, 21 Mar 2022-8:20 pm,

1. ಬಾತ್ರೂಮ್ ವಾಸ್ತು ಸಲಹೆ 1 - ವಾಸ್ತುಶಾಸ್ತ್ರದ  ಪ್ರಕಾರ ಸ್ನಾನಗೃಹದ ಬಾಗಿಲುಗಳು ಮರದಿಂದ ಮಾಡಿರಬೇಕು. ಸ್ನಾನಗೃಹದಲ್ಲಿ ಕಬ್ಬಿಣ ಅಥವಾ ಉಕ್ಕಿನ ಬಾಗಿಲುಗಳು ನಕಾರಾತ್ಮಕತೆಯನ್ನು ಉತ್ತೇಜಿಸುತ್ತವೆ. ಇದು ಆರೋಗ್ಯದ ಮೇಲೂ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.  

2. ಬಾತ್ರೂಮ್ ವಾಸ್ತು ಸಲಹೆ 2 - ಜನರು ಸಾಮಾನ್ಯವಾಗಿ ಬಾತ್ರೂಮ್ನಲ್ಲಿ ಕನ್ನಡಿಗಳನ್ನು ಹಾಕುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಒಳ್ಳೆಯದು. ಅಲ್ಲದೆ, ವಾಶ್ಬಾಸಿನ್ಗಳನ್ನು ಸ್ಥಾಪಿಸಲು ಕೂಡ  ಅದೇ ದಿಕ್ಕು ಸೂಕ್ತವಾಗಿದೆ.  

3. ಬಾತ್ರೂಮ್ ವಾಸ್ತು ಸಲಹೆ 3 - ಮನೆಯ ವಾಯುವ್ಯ ದಿಕ್ಕಿನಲ್ಲಿ ಸ್ನಾನಗೃಹವಿದ್ದರೆ ಉತ್ತಮ. ಕೆಲವರು ನೈಋತ್ಯ ದಿಕ್ಕಿನಲ್ಲಿ ಸ್ನಾನಗೃಹವನ್ನು ನಿರ್ಮಿಸುತ್ತಾರೆ, ಇದು ವಾಸ್ತುವಿನ ದೃಷ್ಟಿಯಿಂದ ಶುಭವಲ್ಲ.  

4. ಬಾತ್ರೂಮ್ ವಾಸ್ತು ಸಲಹೆ 4 - ವಾಸ್ತು ಶಾಸ್ತ್ರದ ಪ್ರಕಾರ, ವಾಶ್ಬಾಸಿನ್ ಮತ್ತು ಶವರ್ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಇದಲ್ಲದೆ, ಬಾತ್ರೂಮ್ ನಿಂದ ಹೊರ ಹೋಗುವ ನೀರಿನ ದಿಕ್ಕು ಹಾಗೂ ಚರಂಡಿಯ ದಿಕ್ಕು ಒಂದೇ ಆಗಿರಬೇಕು.  

5. ಬಾತ್ರೂಮ್ ವಾಸ್ತು ಸಲಹೆ 5 - ಮನೆಯೊಳಗೆ ನಕಾರಾತ್ಮಕ ಶಕ್ತಿ ಹರಡುವುದನ್ನು ತಡೆಯಲು ಯಾವಾಗಲೂ ಸ್ನಾನದ ಬಾಗಿಲುಗಳನ್ನು ಮುಚ್ಚಿಡಿ. ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸುಖ-ಸಂತೋಷ ನೆಲೆಸುತ್ತದೆ ಎಂದು ನಂಬಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link