Vastu For Home: ಮನೆಯಲ್ಲಿ ಈ ಕೆಲಸ ಮಾಡುವುದರಿಂದ ವಾಸ್ತು ದೋಷಗಳು ಉಂಟಾಗುತ್ತವೆ!

Sun, 04 Dec 2022-1:30 pm,

ಸ್ನಾನಗೃಹವನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು. ಸಾಮಾನ್ಯವಾಗಿ ಜನರು ಸ್ನಾನಗೃಹದ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಹೀಗೆ ಮಾಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಮನೆಯ ಸುಖ-ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಕಡಿಮೆಯಾಗಬಹುದು. ಹೀಗಾಗಿ ಬಾತ್ರೂಮ್‍ನ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಬೇಕು.

ಮನೆಯನ್ನು ಸ್ವಚ್ಛವಾಗಿಡುವುದು ಎಲ್ಲಾ ರೀತಿಯಿಂದಲೂ ಉತ್ತಮ. ಶುಚಿತ್ವವನ್ನು ಕಾಪಾಡುವ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಇದಕ್ಕಾಗಿ ಪ್ರತಿದಿನವೂ ಮನೆಯನ್ನು ಸ್ವಚ್ಛಗೊಳಿಸಬೇಕು. ಆದರೆ ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸಬೇಡಿ ಅಥವಾ ಒರೆಸಬೇಡಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಊಟ ಮಾಡಿದ ನಂತರ ತಟ್ಟೆಯಲ್ಲಿ ಆಹಾರವನ್ನು ಬಿಡಬಾರದು. ಹೀಗೆ ಮಾಡುವುದರಿಂದ ತಾಯಿ ಅನ್ನಪೂರ್ಣೆಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದರಿಂದ ಬಡತನವು ಮನೆಯಲ್ಲಿ ನೆಲೆಸಲು ಪ್ರಾರಂಭಿಸುತ್ತದೆ. ಹೀಗಾಗಿ ಹಸಿವಿಗೆ ಅನುಗುಣವಾಗಿ ಆಹಾರ  ತೆಗೆದುಕೊಂಡು ತಟ್ಟೆಯಲ್ಲಿ ಉಳಿದಂತೆ ಸೇವಿಸಬೇಕು.

ಮನೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಿ ಇಲ್ಲಿ ಉಗುಳಬಾರದು. ಇದಲ್ಲದೆ ಯಾತ್ರಾ ಸ್ಥಳಗಳು ಮತ್ತು ದೇವಾಲಯಗಳ ಸುತ್ತಮುತ್ತ ಉಗುಳಬಾರದು. ನಿಮ್ಮ ಈ ಅಭ್ಯಾಸವು ತಾಯಿ ಲಕ್ಷ್ಮಿದೇವಿಯ ಕೋಪಕ್ಕೆ ಕಾರಣವಾಗಬಹುದು.   

ಮನೆಯ ಮುಖ್ಯ ಬಾಗಿಲಿನ ಸುತ್ತ ಸಂಪೂರ್ಣ ಸ್ವಚ್ಛತೆ ಇರಬೇಕು. ಈ ಸ್ಥಳಗಳಲ್ಲಿ ಕಸ-ಕಡ್ಡಿ ಇದ್ದರೆ ಅದನ್ನು ಸ್ವಚ್ಛಗೊಳಿಸಬೇಕು. ಮುಖ್ಯ ಬಾಗಿಲಿನ ಸುತ್ತಲೂ ಕೊಳಕು ಇದ್ದರೆ ತಾಯಿ ಲಕ್ಷ್ಮಿದೇವಿ ಪ್ರವೇಶ ಗೃಹವನ್ನು ಪ್ರವೇಶಿಸುವುದಿಲ್ಲ. ಹೀಗಾಗಿ ಮನೆಯ ಸುತ್ತಮುತ್ತ ಆದಷ್ಟು ಸ್ವಚ್ಛತೆ ಕಾಪಾಡಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link