ಏನೇ ಕಷ್ಟಬಂದರೂ ಮನೆಯಲ್ಲಿ ಈ 4 ವಸ್ತುಗಳು ಖಾಲಿಯಾಗಲು ಬಿಡಬೇಡಿ: ಅಪ್ಪಿತಪ್ಪಿ ಆದರಂತೂ ದುರಾದೃಷ್ಟ ಬೆನ್ನಿಗೆ ಬೀಳುವುದು; ಬಡತನ ಹೆಚ್ಚಾಗುತ್ತೆ!
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೂ ವಿಶೇಷ ಮಹತ್ವವಿದೆ. ಹೀಗಾಗಿಯೇ ಮನೆಯಲ್ಲಿ ಯಾವುದೇ ರೀತಿಯ ದೋಷವಿದ್ದರೆ, ನಕಾರಾತ್ಮಕ ಶಕ್ತಿಯು ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲದೆ, ವಾಸ್ತು ದೋಷದಿಂದಾಗಿ ಮನೆಯವರ ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಸಮೃದ್ಧಿಯ ಕೊರತೆ ಕಾಣಿಸಿಕೊಳ್ಳುತ್ತದೆ.
ಇನ್ನು ವಾಸ್ತು ಶಾಸ್ತ್ರದಲ್ಲಿನ ನಿರ್ದೇಶನಗಳ ಹೊರತಾಗಿ, ಕೆಲವು ವಿಷಯಗಳು ಕೂಡ ಮನೆಯಲ್ಲಿ ಅಶಾಂತಿ ಮೂಡಿಸಲು ಕಾರಣವಾಗಬಹುದು. ಅದರಲ್ಲಿ ಒಂದು ವಿಷಯವೆಂದರೆ, ಕೆಲ ವಸ್ತುಗಳು ಖಾಲಿಯಾಗುವುದು. ಒಂದು ವೇಳೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾದರೆ, ಅದು ಮನೆಯವರ ಪ್ರಗತಿಗೆ ಅಡ್ಡಿ ಬರುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಪ್ರಕಾರ, ಪರ್ಸ್ ಅನ್ನು ಯಾವತ್ತಿಗೂ ಖಾಲಿ ಇಡಬಾರದು. ಕನಿಷ್ಟ ಒಂದು ರುಪಾಯಿಯನ್ನಾದರೂ ಇಡಬೇಕು. ಪರ್ಸ್ ಖಾಲಿಯಾಗಿದ್ದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.
ಇನ್ನು ಪ್ರತಿಯೊಂದು ಮನೆಗೂ ಪೂಜಾ ಕೋಣೆ ಅತ್ಯಂತ ವಿಶೇಷವಾದ ಭಾಗವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆಯಲ್ಲಿ ಇಟ್ಟಿರುವ ನೀರಿನ ಪಾತ್ರೆಯಲ್ಲಿ ನೀರು ಖಾಲಿ ಇಡಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಬಾತ್ ರೂಂನಲ್ಲಿ ಖಾಲಿ ಬಕೆಟ್ ಇಡಬಾರದು. ಒಂದು ವೇಳೆ ಖಾಲಿಯಾಗಿಟ್ಟರೆ, ನಕಾರಾತ್ಮಕ ಶಕ್ತಿಗಳು ಬಹುಬೇಗನೆ ಮನೆಗೆ ನುಗ್ಗುತ್ತವೆ. ಹಾಗೆಯೇ ಆರ್ಥಿಕ ಸಮಸ್ಯೆಗಳ ಜೊತೆಗೆ ವಾಸ್ತು ದೋಷಗಳು ಉಂಟಾಗುತ್ತವೆ.
ಇನ್ನು ಅಡುಗೆ ಮನೆಯ ವಿಚಾರಕ್ಕೆ ಬರುವುದಾದರೆ, ಕಿಚನ್‌ನಲ್ಲಿ ಯಾವತ್ತೂ ಸಹ ಅಕ್ಕಿ, ಉಪ್ಪು ಮತ್ತು ಅರಶಿಣ ಖಾಲಿಯಾಗಬಾರದು. ಇವು ಖಾಲಿಯಾದರೆ ಸಾಲವಾಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.