Vastu Tips : ಸಂಜೆ ವೇಳೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ಮನೆಗೆ ದರಿದ್ರ ಆವರಿಸುತ್ತದೆ!

Sat, 03 Dec 2022-5:12 pm,

ಮನೆಯಲ್ಲಿ ಯಾವತ್ತೂ ಜಗಳ ಮಾಡಬಾರದು, ಆದರೆ ವಿಶೇಷವಾಗಿ ಸಂಜೆ ಸೂರ್ಯಾಸ್ತದ ನಂತರ, ಮನೆಯಲ್ಲಿ ಜಗಳ ಮಾಡಬಾರದು. ಇದರಿಂದ ತಾಯಿ ಲಕ್ಷ್ಮಿಗೆ ಮನಸ್ತಾಪ ಉಂಟಾಗಿ ಮನೆಯಲ್ಲಿ ಬಡತನ ತಾಂಡವವಾಡುತ್ತದೆ.

ಬಡವರು ಅಥವಾ ನಿರ್ಗತಿಕರು ಆಹಾರಕ್ಕಾಗಿ ಅಥವಾ ಇತರ ಯಾವುದೇ ಕೆಲಸದ ಹಂಬಲದಿಂದ ಸಂಜೆ ನಿಮ್ಮ ಮನೆ ಬಾಗಿಲಿಗೆ ಬಂದರೆ, ಅವರನ್ನು ಯಾವತ್ತೂ ಬರಿಗೈಯಲ್ಲಿ ಕಳುಹಿಸಬೇಡಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಬೇಕು.

ಸಂಜೆ, ಮುಖ್ಯ ಬಾಗಿಲು ಸ್ವಲ್ಪ ಹೊತ್ತು ತೆರೆದಿರಬೇಕು. ಸೂರ್ಯಾಸ್ತದ ವೇಳೆಯಲ್ಲಿ ಬಾಗಿಲು ಹಾಕಿಕೊಂಡಿದ್ದಾರೆ ಮನೆಗೆ ಪ್ರವೇಶಿಸಲು ಲಕ್ಷ್ಮಿದೇವಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಲಕ್ಷ್ಮಿಯ ಆಗಮನಕ್ಕಾಗಿ ಮನೆಯ ಮುಖ್ಯ ಬಾಗಿಲನ್ನು ಸ್ವಲ್ಪ ಸಮಯ ತೆರೆದಿಡುವುದು ಅಗತ್ಯ.

ತುಳಸಿ ಗಿಡದ ಎಲೆಗಳನ್ನು ಸಂಜೆ ಮುಟ್ಟಬಾರದು. ಇದರಿಂದ ಲಕ್ಷ್ಮಿದೇವಿ ಕೋಪಗೊಂಡು ಮನೆಯಿಂದ ಹೊರಹೋಗಬಹುದು, ಇದರಿಂದಾಗಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸಾಯಂಕಾಲ ಅಪ್ಪಿತಪ್ಪಿಯೂ ಹಣ ಕೊಡಬಾರದು. ಸಾಯಂಕಾಲ ಕೊಟ್ಟ ಹಣ ಹಿಂತಿರುಗುವುದಿಲ್ಲ ಎಂದು ನಂಬಲಾಗಿದೆ. ಹೀಗಾಗಿ, ಯಾವುದೇ ವ್ಯವಹಾರವನ್ನು ಮಾಡಿದರೂ, ಅದನ್ನು ಸಂಜೆಯ ಮೊದಲು ಮಾಡಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link