Vastu Tips For Money: ನೋಟು ಎಣಿಕೆ ಮಾಡುವಾಗ ಮರೆತೂ ಕೂಡ ಈ ತಪು ಮಾಡ್ಬೇಡಿ, ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ
1. ನೀವು ಯಾವುದೇ ಬಡವರಿಗೆ ಅಥವಾ ನಿರ್ಗತಿಕರಿಗೆ ಹಣವನ್ನು ನೀಡಿದರೆ, ಹಣ ನೀಡುವಾಗ ಹಣದ ಘನತೆ-ಗೌರವವನ್ನು ಕಾಪಾಡಿ. ಒಂದು ವೇಳೆ ನೀವು ಅವರ ಮುಂದೆ ಹಣವನ್ನು ಎಸೆದರೆ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ.
2. ಸಾಮಾನ್ಯವಾಗಿ ಜನರು ಬಾಯಿಯಲ್ಲಿರುವ ಉಗುಳು ಅಥವಾ ಲಾಲಾರಸವನ್ನು ಬಳಸಿ ಎಣಿಕೆ ಮಾಡುತ್ತಾರೆ. ಆದರೆ ಈ ರೀತಿ ಮಾಡುವುದು ತಾಯಿ ಲಕ್ಷ್ಮಿಗೆ ಅವಮಾನವೆಸಗಿದಂತಾಗುತ್ತದೆ. ಆದ್ದರಿಂದ ಈ ಅಭ್ಯಾಸವನ್ನು ತಕ್ಷಣ ಬಿಟ್ಟುಬಿಡಿ. ನೋಟುಗಳನ್ನು ಎಣಿಸಲು ಯಾವಾಗಲೂ ಪೌಡರ್ ಅಥವಾ ನೀರನ್ನು ಬಳಸಿ.
3. ಲಕ್ಷ್ಮಿ ದೇವಿಯು ಹಣದಲ್ಲಿ ನೆಲೆಸಿರುವ ಕಾರಣ, ರಸ್ತೆಯಲ್ಲಿ ಎಲ್ಲೋ ಹಣ ಬಿದ್ದಿರುವುದನ್ನು ಕಂಡರೆ, ಅದನ್ನು ಎತ್ತಿಕೊಂಡು ಮೊದಲು ನಿಮ್ಮ ಹಣೆಯ ಮೇಲೆ ಇಟ್ಟು ನಮಸ್ಕರಿಸಿ.
4. ಹಾಸಿಗೆ ಅಥವಾ ದಿಂಬಿನ ಮೇಲೆ ಹಣವನ್ನು ಎಂದಿಗೂ ಇಡಬೇಡಿ. ಅವುಗಳನ್ನು ಸ್ವಚ್ಛವಾದ ಸ್ಥಳದಲ್ಲಿ ಅಥವಾ ಬೀರುವಿನಲ್ಲಿ ಇರಿಸಿ. ಲಕ್ಷ್ಮಿಯ ನಾಣ್ಯವನ್ನು ಅದರೊಂದಿಗೆ ಇಡುವುದು ಮತ್ತಷ್ಟು ಉತ್ತಮ. ಇದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ.
5. ಆಹಾರ ಪದಾರ್ಥಗಳನ್ನು ಎಂದಿಗೂ ಹಣದೊಂದಿಗೆ ಇಡಬೇಡಿ. ಅದೇನೆಂದರೆ, ನೀವು ನಿಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಹಣವನ್ನು ಇಟ್ಟುಕೊಳ್ಳುತ್ತಿದ್ದರೆ, ಅದರಲ್ಲಿ ಆಹಾರ ಪದಾರ್ಥಗಳನ್ನು ಇಡಬೇಡಿ. ಇದರಿಂದ ಹಣಕ್ಕೆ ಅಪಮಾನ ಎಸಗಿದಂತಾಗುತ್ತದೆ.