Vastu Tips: ಮನೆಯಲ್ಲಿರುವ ಈ ವಸ್ತುಗಳು ಮತ್ತು ತಪ್ಪುಗಳು ಬಡವನನ್ನಾಗಿಸುತ್ತವೆ, ಇಂದೇ ಅವುಗಳನ್ನು ಸರಿಪಡಿಸಿ
ಪೊರಕೆಯನ್ನು ಸಾಮಾನ್ಯವಾಗಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಸಂಬಂಧ ಕಲ್ಪಿಸಲಾಗುತ್ತದೆ. ಪೊರಕೆಯನ್ನು ಒದೆಯುವುದು, ಅದನ್ನು ತಪ್ಪು ದಿಕ್ಕಿನಲ್ಲಿ ಅಥವಾ ತಪ್ಪು ದಾರಿಯಲ್ಲಿ ಇಡುವುದು ಮನೆಯಲ್ಲಿ ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ. ಪೊರಕೆಯನ್ನು ಈಶಾನ್ಯದಿಕ್ಕಿನಲ್ಲಿ ಎಂದಿಗೂ ಕೂಡ ಇಡಬೇಡಿ ಮತ್ತು ಅದನ್ನು ಯಾವಾಗಲೂ ಯಾರಿಗೂ ಕಾಣದ ಸ್ಥಾನದಲ್ಲಿಡಿ. ಅಲ್ಲದೆ, ಅದನ್ನು ಎಂದಿಗೂ ನಿಲ್ಲಿಸಬೇಡಿ.
ಮನೆಯಲ್ಲಿ ಹಾಳಾದ ಅಥವಾ ಮುರುಕಲು ಪಾತ್ರೆಗಳನ್ನು ಕೂಡಿ ಹಾಕುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚುತ್ತದೆ. ನಿರುಪಯುಕ್ತ ವಸ್ತುಗಳ ರಾಶಿ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ. ಅಂತಹ ಮನೆಯಲ್ಲಿ ಮನೆಯ ಸದಸ್ಯರ ಎಲ್ಲಾ ಪ್ರಯತ್ನಗಳ ನಂತರವೂ ಕೂಡ ಪ್ರಗತಿಯಾಗಲೀ ಅಥವಾ ಆದಾಯವಾಗಲೀ ಹೆಚ್ಚಾಗುವುದಿಲ್ಲ.
ಮನೆಯಲ್ಲಿರುವ ಜೇಡರ ಬಲೆಗಳು ಕ್ರಮೇಣ ವ್ಯಕ್ತಿಯನ್ನು ಬಡತನದತ್ತ ಕೊಂಡೊಯ್ಯುತ್ತವೆ. ಆದ್ದರಿಂದ, ಮನೆಯಲ್ಲಿ ಜೇಡರ ಬಲೆಗಳಿಗೆ ಸ್ಥಾನ ಕೊಡಬೇಡಿ
ಪಕ್ಷಿಗಳು ಮನೆಯಲ್ಲಿ ಗೂಡು ಕಟ್ಟುವುದು ಶುಭ, ಆದರೆ ಮನೆಯಲ್ಲಿ ಪಾರಿವಾಳದ ಗೂಡು ಇರುವುದು ಶುಭವಲ್ಲ ಎನ್ನಲಾಗುತ್ತದೆ. ಏಕೆಂದರೆ ಪಾರಿವಾಳದ ಸಂಬಂಧವನ್ನು ಶಾಸ್ತ್ರಗಳಲ್ಲಿ ರಾಹುವಿನ ಜೊತೆಗೆ ಕಲ್ಪಿಸಲಾಗಿದೆ.
ಮನೆಯಲ್ಲಿ ಎಂದಿಗೂ ಮುಳ್ಳು ಗಿಡಗಳನ್ನು ನೆಡಬಾರದು. ಮನೆಯಲ್ಲಿ ಜಗಳ ಮತ್ತು ಅಪಶ್ರುತಿಯನ್ನು ಅವು ಹೆಚ್ಚಿಸುತ್ತವೆ. ಇದರೊಂದಿಗೆ ಜೀವನದಲ್ಲಿ ಅನೇಕ ತೊಂದರೆಗಳು ಮತ್ತು ಅಡೆತಡೆಗಳನ್ನು ಉಂಟುಮಾಡುತ್ತವೆ.