Vastu Tips For Tulsi: ಮನೆಯ ಈ ಸ್ಥಳಗಳಲ್ಲಿ ಮರೆತೂ ಸಹ ತುಳಸಿ ಸಸ್ಯವನ್ನು ಇಡಲೇಬಾರದು

Thu, 14 Dec 2023-11:49 am,

ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯವನ್ನು ಮನೆಯ ಕೆಲವು ಜಾಗಗಳಲ್ಲಿ ಇಡಲೇಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. 

ವಾಸ್ತುವಿನ ಪ್ರಕಾರ, ಮನೆಯ ಈ ಭಾಗಗಳಲ್ಲಿ ತುಳಸಿ ಸಸ್ಯವನ್ನು ಇಡುವುದರಿಂದ ಅಂತಹ ಮನೆಯಲ್ಲಿ ಸುಖ-ಸಂತೋಷ ಕಣ್ಮರೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮನೆಯ ಯಾವ ಜಾಗಗಳಲ್ಲಿ ತುಳಸಿ ಸಸ್ಯವನ್ನು ಇಡಬಾರದು ಎಂದು ತಿಳಿಯೋಣ... 

ವಾಸ್ತು ಶಾಸ್ತ್ರದ ಪ್ರಕಾರ, ಅತ್ಯಂತ ಮಂಗಳಕರ ಸಸ್ಯವಾದ ತುಳಸಿ ಸಸ್ಯವನ್ನು ಮನೆಯ ಕಸ ಇಡುವ ಜಾಗದಲ್ಲಿ ಇಡಬಾರದು. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. 

ವಾಸ್ತು ಪ್ರಕಾರ, ತುಳಸಿ ಸಸ್ಯವನ್ನು ಕತ್ತಲೆ ಕೋಣೆಯಲ್ಲಿ, ಬೆಳಕು ಬಾರದೇ ಇರುವ ಮೂಲೆಯಲ್ಲಿ ಎಂದಿಗೂ ಇಡಬಾರದು ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಎಂದಿಗೂ ಸಹ ತುಳಸಿ ಸಸ್ಯದೊಂದಿಗೆ ಗಣೇಶನ ವಿಗ್ರಹವಾಗಲಿ, ಇಲ್ಲವೇ, ಗಣೇಶನ ಚಿತ್ರವನ್ನಾಗಲಿ ಇಡಬಾರದು. ಇದು ತುಳಸಿ ಮಾತೆಯ ಕೋಪಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ.   

ವಾಸ್ತುವಿನ ಪ್ರಕಾರ, ಶಿವನ ವಿಗ್ರಹ, ಇಲ್ಲವೇ ಚಿತ್ರದೊಂದಿಗೂ ಸಹ ತುಳಸಿ ಸಸ್ಯವನ್ನು ಇಡಬಾರದು. ಇದರಿಂದಾಗಿ ಮನೆಯಲ್ಲಿ ಸಂಪತ್ತಿನ ಕೊರತೆ ಉಂಟಾಗುವುದು. ಮಾತ್ರವಲ್ಲ, ಮನೆಯ ನೆಮ್ಮದಿಗೆ ಭಂಗ ಬರಬಹುದು ಎನ್ನಲಾಗುತ್ತದೆ. 

ಕೆಲವರು ಮನೆಯ ಛಾವಣಿಯ ಮೇಲೆ ತುಳಸಿ ಸಸ್ಯವನ್ನು ಇಡುತ್ತಾರೆ. ಆದರೆ, ನಿಮ್ಮ ಈ ತಪ್ಪು ಮನೆಯಲ್ಲಿ ಸುಖ-ಸಂತೋಷವನ್ನು ಕಸಿಯುವುದರ ಜೊತೆಗೆ ಬಡತನಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link