Vastu Tips: ಶ್ರಾವಣ ಮಾಸದಲ್ಲಿ ತುಳಸಿ ಜೊತೆ ಈ ಗಿಡ ನೆಟ್ಟರೆ ಮನೆಯಲ್ಲಿ ಹಣದ ಮಳೆಯಾಗಲಿದೆ..!

Thu, 14 Jul 2022-12:09 pm,

ಬಿಲ್ವಪತ್ರೆ ಎಲೆಗಳನ್ನು ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷವಾಗಿ ಅರ್ಪಿಸಲಾಗುತ್ತದೆ. ಬಿಲ್ವಪತ್ರೆ ಶಿವನಿಗೆ ತುಂಬಾ ಪ್ರಿಯ. ಅಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಿಲ್ವಪತ್ರೆ ಮರವಿದ್ದರೆ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶ್ರಾವಣ ಮಾಸದಲ್ಲಿ ಬಿಲ್ವಪತ್ರೆಯ ಗಿಡವನ್ನು ಮನೆಯಲ್ಲಿ ನೆಟ್ಟರೆ ಅಪಾರ ಧನಲಾಭದ ಜೊತೆಗೆ ಸುಖ-ಸಂತೋಷ ಮನೆ ಮಾಡುತ್ತದೆ.

ವಾಸ್ತುದಲ್ಲಿ ಶಮಿ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಶಮಿ ಗಿಡ ನೆಡುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ. ತುಳಸಿಯ ಜೊತೆಗೆ ಶಮಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಶುಭ ಫಲಗಳು ಬಹುಮಟ್ಟಿಗೆ ಹೆಚ್ಚಾಗುತ್ತವೆ. 

ದತುರಾ ಶಿವನಿಗೆ ತುಂಬಾ ಪ್ರಿಯವಾದುದಾಗಿದೆ, ಆದ್ದರಿಂದ ಶಿವನ ಪೂಜೆಯಲ್ಲಿ ದತುರಾವನ್ನು ಅರ್ಪಿಸಲಾಗುತ್ತದೆ.  ಶ್ರಾವಣ ಮಾಸದಲ್ಲಿ ಭಾನುವಾರ ಅಥವಾ ಮಂಗಳವಾರ ಮನೆಯಲ್ಲಿ ಧಾತುರ ಗಿಡವನ್ನು ನೆಡಿ. ಇದರಿಂದ ಭೋಲೇನಾಥನ ಅಪಾರ ಆಶೀರ್ವಾದ ನಿಮಗೆ ದೊರೆಯುತ್ತದೆ.  

ಬಾಳೆ ಗಿಡವನ್ನು ನೆಡುವುದರಿಂದ ವಿಷ್ಣು ಮತ್ತು ಗುರು ಗ್ರಹದ ಅನುಗ್ರಹ ದೊರೆಯುತ್ತದೆ. ತುಳಸಿ ಗಿಡದ ಜೊತೆಗೆ ಬಾಳೆಗಿಡವನ್ನು ಮನೆಯಲ್ಲಿ ನೆಟ್ಟರೆ ಆರ್ಥಿಕ ಸಮಸ್ಯೆಗಳೆಲ್ಲವೂ ಕೊನೆಗೊಳ್ಳುತ್ತವೆ. ಆದರೆ ಈ ೨ ಗಿಡಗಳನ್ನು ಅಕ್ಕಪಕ್ಕದಲ್ಲಿ ನೆಡಬೇಡಿ. ಮನೆಯ ಮುಖ್ಯ ಬಾಗಿಲಿನ ಎಡಭಾಗದಲ್ಲಿ ತುಳಸಿ ಗಿಡ ಮತ್ತು ಬಲಭಾಗದಲ್ಲಿ ಬಾಳೆ ಗಿಡ ನೆಟ್ಟರೆ ಉತ್ತಮ.   

ಶ್ರಾವಣ ಮಾಸದಲ್ಲಿ ಚಂಪಾ ಗಿಡವನ್ನು ಮನೆಯಲ್ಲಿ ನೆಡುವುದು ಕೂಡ ತುಂಬಾ ಶುಭಕರ. ಈ ಸಸ್ಯವು ಅದೃಷ್ಟದ ಸಂಕೇತವಾಗಿದೆ ಮತ್ತು ಅದನ್ನು ನೆಡುವುದರಿಂದ ಮನೆಗೆ ಬಹಳಷ್ಟು ಸಂಪತ್ತು ಬರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಸಸ್ಯವನ್ನು ವಾಯುವ್ಯ ದಿಕ್ಕಿನಲ್ಲಿ ನೆಡುವುದು ಉತ್ತಮ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link