Astro Tips: ಈ ದಿನ ತುಳಸಿಗೆ ನೀರು ಹಾಕಬೇಡಿ.. ಸಂಪತ್ತೆಲ್ಲ ನಾಶವಾಗಿ ಶ್ರೀಮಂತನಿಗೂ ದಾರಿದ್ರ್ಯ ವಕ್ಕರಿಸುವುದು, ಜೀವನ ಪೂರ್ತಿ ತಪ್ಪಿದ್ದಲ್ಲ ಕಷ್ಟ !
)
ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಪವಿತ್ರ ಸಸ್ಯವೆಂದು ಪೂಜಿಸಲಾಗುತ್ತದೆ.
)
ವಿಷ್ಣು ಮತ್ತು ಲಕ್ಷ್ಮಿ ತುಳಸಿಯಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ತುಳಸಿಯವನ್ನು ಮನೆಯ ಅಂಗಳದಲ್ಲಿ ನೆಟ್ಟು ಪ್ರತಿನಿತ್ಯ ಪೂಜಿಸುವ ರೂಢಿಯಿದೆ.
)
ತುಳಸಿ ಗಿಡಕ್ಕೆ ನೀರು ಹಾಕಿ, ದೀಪ ಹಚ್ಚಿಟ್ಟು ಪೂಜಿಸುತ್ತಾರೆ. ತುಳಸಿ ಪೂಜೆಯಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಜೊತೆಗೆ ಹಣದ ಹರಿವು ಹೆಚ್ಚಾಗುತ್ತದೆ.
ಆದರೆ ತುಳಸಿಗೆ ನೀರನ್ನು ಅರ್ಪಿಸಲು ಕೆಲವು ನಿಯಮಗಳನ್ನು ಹೇಳಲಾಗಿದೆ. ಈ ಎರಡು ದಿನ ತುಳಸಿಗೆ ನೀರು ಹಾಕಾರದು. ಇದು ಮನೆಯ ಐಶ್ವರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ.
ತುಳಸಿಗೆ ಈ ಎರಡು ದಿನದಂದು ಮಾತ್ರ ಅಪ್ಪಿ ತಪ್ಪಿಯೂ ನೀರು ಹಾಕಬಾರದು. ಇದು ಜೀವನದಲ್ಲಿ ಬಡತನ ತರುತ್ತದೆ. ಇದರಿಂದ ಧನಹಾನಿಯಾಗುತ್ತದೆ.
ತುಳಸಿ ಗಿಡಕ್ಕೆ ಭಾನುವಾರ ನೀರನ್ನು ಹಾಕಬೇಡಿ. ಭಾನುವಾರ ತುಳಸಿ ನೀರಿಲ್ಲದ ಉಪವಾಸವನ್ನು ಆಚರಿಸುತ್ತಾಳೆ. ನೀರು ಹಾಕಿದರೆ ಇದಕ್ಕೆ ಭಂಗ ತಂದಂತೆ.
ಭಾನುವಾರ ತುಳಸಿಗೆ ನೀರು ಹಾಕಿದಾಗ ಉಪವಾಸವನ್ನು ಮುರಿದಂತೆ ಆಗುತ್ತದೆ. ಇದರಿಂದ ತುಳಸಿ ಕೋಪಗೊಳ್ಳುವಳು. ಇದೇ ದಾರಿದ್ರ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಈ ದಿನ ತಪ್ಪಿಯೂ ತುಳಸಿಗೆ ನೀರು ಅರ್ಪಿಸಬೇಡಿ.
ಏಕಾದಶಿಯ ದಿನದಂದು ತುಳಸಿ ಕೀಳಬಾರದು. ಅಲ್ಲದೇ ತುಳಸಿಗೆ ನೀರನ್ನು ಅರ್ಪಿಸಬಾರದು. ಇದು ವಿಷ್ಣುವಿನ ಕೋಪಕ್ಕೆ ಕಾರಣವಾಗುತ್ತದೆ.
ಏಕಾದಶಿಯಂದು ತುಳಸಿಯು ವಿಷ್ಣುವಿನ ಪೂಜೆಯಲ್ಲಿರುತ್ತಾಳೆ. ನಿರ್ಜಲ ವ್ರತವನ್ನು ಆಚರಿಸುತ್ತಾಳೆ. ಈ ದಿನ ತುಳಸಿಗೆ ನೀರನ್ನು ಅರ್ಪಿಸಿದರೆ ವ್ರತಭಂಗವಾದಂತೆ. ಇದು ನಿಮ್ಮ ಮನೆಯ ಶಾಂತಿಯನ್ನು ಕೆಡಿಸುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)