Vastu Tips: ಮನೆಯ ಈ ಸ್ಥಳದಲ್ಲಿ ಶಂಖವನ್ನು ಇಟ್ಟರೆ ಹಣದ ಸಮಸ್ಯೆ ದೂರವಾಗುತ್ತದೆ..!

Mon, 31 Jul 2023-8:13 pm,

ವಾಸ್ತುಶಾಸ್ತ್ರದ ಪ್ರಕಾರ ಪ್ರತಿದಿನವೂ ಬೆಳಗ್ಗೆ ಬೇಗ ಎದ್ದ ಕೂಡಲೇ ಕಿಟಕಿ ಬಾಗಿಲು ತೆರೆಯಬೇಕು. ಇದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬಂದು ಮನೆಯ ಪರಿಸರವೂ ಸಂತೋಷದಿಂದ ಕೂಡಿರುತ್ತದೆ. ಪ್ರತಿದಿನ ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಹಣದ ಒಳಹರಿವು ಉತ್ತಮವಾಗಿರುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯು ಪೊರಕೆಯಲ್ಲಿ ನೆಲೆಸಿದ್ದಾಳೆಂಬ ನಂಬಿಕೆಯಿದೆ. ಇಂತಹ ಪೊರಕೆಯನ್ನು ಸರಿಯಾದ ದಿಕ್ಕಿನಲ್ಲಿ ಮನೆಯಲ್ಲಿ ಇಡಬೇಕು. ಪೊರಕೆಯನ್ನು ಮನೆಗೆ ಭೇಟಿ ನೀಡುವವರ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಬೇಕು. ಪೊರಕೆಯನ್ನು ಕಾಲಿನಿಂದ ಒದೆಯಬಾರದು.

ವಾಸ್ತುಪ್ರಕಾರ ಲಕ್ಷ್ಮಿದೇವಿಯು ಸ್ವಚ್ಛವಾದ ಸ್ಥಳದಲ್ಲಿ ನೆಲೆಸುತ್ತಾಳಂತೆ. ಹೀಗಾಗಿ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡುವುದು ಮುಖ್ಯ. ಮನೆಯ ಸ್ವಚ್ಛ ಪರಿಸರದಲ್ಲಿ ಲಕ್ಷ್ಮಿದೇವಿಯನ್ನು ಇಡುವುದರಿಂದ ಹಣದ ಸಮಸ್ಯೆಗಳಿಗೆ ಅಂತ್ಯ ಹಾಡಬಹುದು.

ವಾಸ್ತುಶಾಸ್ತ್ರದ ಪ್ರಕಾರ ಅನ್ನಪೂರ್ಣೆಯನ್ನು ಪ್ರತಿನಿತ್ಯ ಪೂಜಿಸುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಅನ್ನ, ಧನ-ಕನಕಗಳು ತುಂಬಿ ತುಳುಕಾಡುತ್ತವೆ ಎಂದು ಹೇಳಲಾಗಿದೆ. ವಾಸ್ತು ಪ್ರಕಾರ ಓಂ, ಶ್ರೀ ಗಣೇಶ ಮತ್ತು ಶುಭ-ಲಾಭ ಚಿಹ್ನೆಗಳನ್ನು ಮನೆಯ ಬಾಗಿಲಿನಲ್ಲಿಡುವುದು ಉತ್ತಮ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ.  

ವಾಸ್ತು ಪ್ರಕಾರ ಶಂಖವು ಲಕ್ಷ್ಮಿದೇವಿಗೆ ಸಂಬಂಧಿಸಿದೆ. ಹೀಗಾಗಿ ಮನೆಯ ಪೂಜಾ ಕೊಠಡಿಯಲ್ಲಿ ಶಂಖ ಇಡುವುದು ಉತ್ತಮ. ಇದರಿಂದ ಲಕ್ಷ್ಮಿದೇವಿಯು ಮನೆಯಲ್ಲಿ ಸದಾ ನೆಲೆಸುತ್ತಾಳಂತೆ. ಪ್ರತಿನಿತ್ಯ ಶಂಖವನ್ನು ಪೂಜಿಸುವುದರಿಂದ ಲಕ್ಷ್ಮಿದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link