Vastu Tips For 2023: ವರ್ಷವಿಡೀ ತಾಯಿ ಲಕ್ಷ್ಮೀ ಆಶೀರ್ವಾದಕ್ಕಾಗಿ ಇಂದೇ ನಿಮ್ಮ ಬಾತ್ ರೂಂನಿಂದ ಈ ವಸ್ತುಗಳನ್ನು ತೆಗೆಯಿರಿ

Wed, 14 Dec 2022-7:27 am,

ಹೊಸ ವರ್ಷಕ್ಕೆ ವಾಸ್ತು ಸಲಹೆ:

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಬೇಕು. ಆರ್ಥಿಕ ಪ್ರಗತಿ ಆಗಬೇಕು ಎಂದು ಬಯಸುತ್ತಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಹೊಸ ವರ್ಷ ಆರಂಭವಾಗುವುದಕ್ಕೂ ಮುನ್ನ ಮೊದಲು ನಿಮ್ಮ ಮನೆಯ ಬಾತ್ ರೂಂ ಅಂದರೆ ಸ್ನಾನಗೃಹದಿಂದ ನಕಾರಾತ್ಮಕತೆಯನ್ನು ಹರಡಬಲ್ಲ ಕೆಲವು ವಸ್ತುಗಳನ್ನು ಹೊರಹಾಕಿ. ಆ ವಸ್ತುಗಳು ಯಾವುವು ಎಂದು ತಿಳಿಯೋಣ...

ಸೋರುವ ಟ್ಯಾಪ್: ಸಾಮಾನ್ಯವಾಗಿ ಸ್ನಾನಗೃಹದಲ್ಲಿ ನೀರಿನ ಟ್ಯಾಪ್ ಸೋರುವುದನ್ನು ಕಾಣಬಹುದು. ಇದು ಟ್ಯಾಪ್ ದೋಷದಿಂದ ಆದರೂ ಸದಾ ಮನೆಯಲ್ಲಿ ನೀರು ತೊಟ್ಟಿಕ್ಕುವುದರಿಂದ ವಾಸ್ತು ದೋಷಕ್ಕೆ ಕಾರಣವಾಗಬಹುದು. ಹಾಗಾಗಿ, ನಿಮ್ಮ ಮನೆಯಲ್ಲಿಯೂ ಈ ಸಮಸ್ಯೆ ಇದ್ದರೆ ಮೊದಲು ಅದನ್ನು ಸರಿಪಡಿಸಿ.

ಒದ್ದೆ ಬಟ್ಟೆ:  ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಸದಾ ಒದ್ದೆ ಬಟ್ಟೆಗಳನ್ನು ಇಡುವುದನ್ನೂ ಕೂಡ ನಿಷೇಧಿಸಲಾಗಿದೆ. ಕಾರಣ, ಸದಾ ಮೂಲೆಯಲ್ಲಿಡುವ ಒದ್ದೆ ಬಟ್ಟೆಗಳು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ನೀವೂ ಸಹ ಮನೆಯ ಬಾತ್ ರೂಂನಲ್ಲಿ ಒದ್ದೆ ಬಟ್ಟೆಗಳನ್ನು ಇಡುವ ಅಭ್ಯಾಸ ಹೊಂದಿದ್ದರೆ ಇಂದೇ ಈ ಅಭ್ಯಾಸವನ್ನು ಬಿಡಿ.

ಮುರಿದ ಗಾಜಿನ ವಸ್ತುಗಳು: ವಾಸ್ತು ಪ್ರಕಾರ, ಮನೆಯಲ್ಲಿರುವ ಮುರಿದ ವಸ್ತುಗಳು ಕೂಡ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ನೀವು ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಬಯಸಿದರೆ ಹೊಸ ವರ್ಷ ಆರಂಭವಾಗುವ ಮೊದಲು ನಿಮ್ಮ ಮನೆಯಿಂದ ಇಂತಹ ಮುರಿದ ಗಾಜು ಅಥವಾ ಇನ್ನಾವುದೇ ಮುರಿದ ವಸ್ತುಗಳನ್ನು ಸ್ನಾನಗೃಹದ ಅಟ್ಟದಲ್ಲಿ ಇಟ್ಟಿದ್ದರೂ ಕೂಡ ಮೊದಲು ಅದನ್ನು ಬಿಸಾಡಿ.

ಖಾಲಿ ಬಕೆಟ್ ಇಡಬಾರದು: ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ಬಕೆಟ್ ಅನ್ನು ಖಾಲಿಯಾಗಿಡುವ ಅಭ್ಯಾಸ ಇರುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿರುವ ಖಾಲಿ ಬಕೆಟ್ ನಕಾರಾತ್ಮಕತೆ ಜೊತೆಗೆ ದುರಾದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ತಪ್ಪಿಸಲು ಇಂದಿನಿಂದಲೇ ನಿಮ್ಮ ಮನೆಯ ಬಾತ್ ರೂಂನಲ್ಲಿ ಖಾಲಿ ಬಕೆಟ್ ಇಡುವುದನ್ನು ತಪ್ಪಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link