Vastu Tips: ಸಂತೋಷ, ಸಮೃದ್ಧಿಗಾಗಿ ಮನೆಯ ಮುಖ್ಯ ದ್ವಾರದಲ್ಲಿ ಈ ವಸ್ತುಗಳನ್ನು ಇಡಿ

Fri, 28 Oct 2022-2:54 pm,

ಮುಖ್ಯ ದ್ವಾರಕ್ಕೆ ಸಂಬಂಧಿಸಿದಂತೆ ವಾಸ್ತು ಸಲಹೆ: ಮುಖ್ಯ ದ್ವಾರಕ್ಕೆ ಸಂಬಂಧಿಸಿದಂತೆ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಅಂತಹ ಮನೆಯಲ್ಲಿ  ಸುಖ-ಸಮೃದ್ಧಿಯ ಬಾಗಿಲು ತೆರೆಯಬಹುದು ಎಂದು ಹೇಳಲಾಗುತ್ತದೆ.  ಹಾಗಾದರೆ ಮುಖ್ಯ ಬಾಗಿಲಿಗೆ ಸಂಬಂಧಿಸಿದ ವಾಸ್ತು ಸಲಹೆಗಳು ಯಾವುವು,  ಮುಖ್ಯ ದ್ವಾರದ ಬಳಿ ಯಾವ ವಸ್ತುಗಳನ್ನು ಇಡುವುದರಿಂದ ಭಾಗ್ಯೋದಯವಾಗುತ್ತದೆ ಎಂದು ತಿಳಿಯೋಣ-

ಮುಖ್ಯ ದ್ವಾರ ಈ ದಿಕ್ಕಿಗಿದ್ದರೆ ಶುಭ: ವಾಸ್ತು ಶಾಸ್ತ್ರದ ಪ್ರಕಾರ ಉತ್ತರ, ಈಶಾನ್ಯ, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮುಖ್ಯ ದ್ವಾರವಿದ್ದರೆ ಶುಭ. ಮುಖ್ಯ ಬಾಗಿಲು ಮನೆಯ ಉಳಿದ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಅಲ್ಲದೆ ಬಾಗಿಲು ಪ್ರದಕ್ಷಿಣಾಕಾರವಾಗಿ ತೆರೆಯಬೇಕು. ಮನೆಯಲ್ಲಿ ಸಮೃದ್ಧಿಗಾಗಿ, ಗಣಪತಿ ಬಪ್ಪನ ವಿಗ್ರಹವನ್ನು ಮನೆಯ ಮುಖ್ಯ ದ್ವಾರದಲ್ಲಿ ಇಡುವುದು ಮಂಗಳಕರವಾಗಿದೆ.   

ಸ್ವಸ್ತಿಕ: ಮನೆಯ ಮುಖ್ಯ ಬಾಗಿಲಿನಲ್ಲಿ ಸ್ವಸ್ತಿಕ ಚಿಹ್ನೆ ಇರುವುದನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ಚಿಹ್ನೆಯು ವಾಸ್ತು ದೋಷಗಳನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿದೆ. ವಿಶೇಷವಾಗಿ ಕೆಂಪು ಬಣ್ಣದಿಂದ ಮಾಡಿದ ಸ್ವಸ್ತಿಕವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ತುಳಸಿ ಗಿಡ: ಮುಖ್ಯ ದ್ವಾರದ ಬಳಿ ತುಳಸಿ ಗಿಡವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ವಿಷ್ಣುವಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ, ತುಳಸಿಯನ್ನು ಬಾಗಿಲಲ್ಲಿ ಇಟ್ಟರೆ ತಾಯಿ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ. ತುಳಸಿ ಸಸ್ಯವು ಸಕಾರಾತ್ಮಕತೆಯ ಸಂಕೇತವಾಗಿದೆ.

ಮಂಗಳ ಕಲಶ: ಪ್ರತಿದಿನ ಮನೆಯ ಮುಖ್ಯದ್ವಾರದಲ್ಲಿ ನೀರು ತುಂಬಿದ ಮಂಗಳ ಕಲಶವನ್ನು ಇಡುವುದು ಕಷ್ಟವಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಇದನ್ನು ಮಾಡಬಹುದು. ವಿಶೇಷವಾಗಿ, ಮನೆಯ ಮುಖ್ಯದ್ವಾರದಲ್ಲಿ ನೀರು ತುಂಬಿದ ಮಂಗಳ ಕಲಶವನ್ನು ಇಡುವುದು ಮಂಗಳಕರ. ಮಂಗಳ ಕಲಶವು ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರಗಿಡುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುವಂತೆ ಮಾಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link