Vastu Tips: ವಾಸ್ತುವಿನ ಪ್ರಕಾರ ತಲೆದಿಂಬಿನ ಕೆಳಗೆ ಈ 5 ವಸ್ತುಗಳನ್ನು ಇಟ್ಟು ಮಲಗುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ತಕ್ಷಣ ಪರಿಹಾರ ಸಿಗಲಿದೆ!!
Vastu Tips: ವಾಸ್ತು ಎಂಬುದು ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಜೀವನದಲ್ಲಿನ ಕೆಟ್ಟ ದಿನಗಳನ್ನು ತೆಗೆದು ಹಾಕುವಲ್ಲಿ ವಸ್ತು ತುಂಬಾ ಸಹಾಯ ಮಾಡುತ್ತದೆ. ಅದರಂತೆ ಕೆಲವು ವಸ್ತುಗಳನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ನಿಮ್ಮ ಜೀವನದಲ್ಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ವಾಸ್ತು ಶಾಸ್ತ್ರದ ಪ್ರಕಾರ ಲವಂಗ, ಹರಲೆನ್ನೇ ಹಾಗೂ ನವಿಲುಗರಿ ಸೇರಿದಂತೆ ಮುಂತಾದ ವಸ್ತುಗಳನ್ನು ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಇವುಗಳನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ , ಧಮಾತ್ಮಕ ಶಕ್ತಿಯನ್ನು ಇದು ಆಕರ್ಷಿಸುತ್ತದೆ ಎನ್ನುವ ನಂಬಿಕೆ ಇದೆ. ಈ ವಸ್ತುಗಳನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ.
ವಸ್ತುವಿನ ಪ್ರಕಾರ ಈ 5 ವಸ್ತುಗಳನ್ನು ಪ್ರತಿನಿತ್ಯ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಜೀವನದಲ್ಲಿ ನೀವು ಹಲವಾರು ಬದಲಾವಣೆಗಳನ್ನು ಕಾಣಬಹುದು. ನೀವು ಬಯಸಿದ್ದನೆಲ್ಲಾ ಪಡೆಯಬಹುದು.
ನವಿಲು ಗರಿ ಹಿಂದು ಧರ್ಮದ ಪ್ರಕಾರ ನವಿಲು ಗರಿಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇದು ಪ್ರೀತಿ ಹಾಗು ಸಂತೋಷವನ್ನು ಆಕರ್ಷಿಸುತ್ತದೆ. ಅಷ್ಟೆ ಅಲ್ಲ ದುಷ್ಠ ಶಕ್ತಿಯನ್ನು ತಡೆದು ಹಾಕಿ, ಸಂಪತ್ತನ್ನು ಆಕರ್ಷಿಸುತ್ತದೆ. ಆದ್ದರಿಂದ ನೀವು ಮಲಗುವಾಗ ನಿಮ್ಮ ತಲೆ ದಿಂಬಿನ ಕೆಳಗೆ ನವಿಲು ಗರಿ ಇಟ್ಟು ಮಲಗುವುದರಿಂದ ಇದು ನಿಮ್ಮ ಧನಾತ್ಮಕ ಶಕ್ತಿ ಹಾಗು ಬದುಕಿನಲ್ಲಿ ಸಂತೋಷ ಹೆಚ್ಚಾಗುತ್ತದೆ.
ಲವಂಗ ಪ್ರತಿದಿನ ನೀವು ಮಲಗುವಾಗ ತಲೆ ದಿಂಬಿನ ಕೆಳಗೆ 5,7 ಅಥವಾ 9 ಲಾವಂಗಗಳೊಂದಿಗೆ ಮಲಗಬಹುದು. ಹೀಗೆ ಮಾಡುವುದರಿಂದ. ಪಾಸಿಟಿವ್ ಎನರ್ಜಿ ಮನೆಯಲ್ಲಿ ಹೆಚ್ಚಾಗುತ್ತದೆ ಮತ್ತೆ ನೆಗೆಟಿವ್ ಎನರ್ಜಿ ಮನೆಯಲ್ಲಿ ಕಡಿಮೆಯಾಗುತ್ತದೆ.
ಬಿರಿಯಾನಿ ಎಲೆ ವಾಸ್ತು ಶಾಸ್ತ್ರದ ಪ್ರಕಾರ ಬಿರಿಯಾನಿ ಎಲೆಯನ್ನು ತಲೆ ದಿಂಬಿನ ಕೆಳಗೆ ಇರಿಸಿಕೊಂಡು ಮಲಗುವುದರಿಂದ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
ಹರಳೆಣ್ಣೆ ವಾಸ್ತುವಿನ ಪ್ರಕಾರ, ಹರಳೆಣ್ಣೆಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ, ದುಷ್ಟ ಶಕ್ತಿಗಳು ದೂರವಾಗುತ್ತದೆ. ಕನಿಷ್ಠ 7 ದಿನಗಳ ಕಾಲ ದಿಂಬಿನ ಕೆಳಗೆ ಹರಳೆಣ್ಣೆಯ ತುಂಡನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ.
ತುಳಸಿ ಎಲೆ ಹಿಂದು ಧರ್ಮದಲ್ಲಿ ತುಅಲ್ಸಿ ಎಲೆಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ. ಅಷ್ಟೇ ಅಲ್ಲ ತುಳಸಿ ಎಲೆಯನ್ನು ದೇವರ ಪೂಜೆಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ತಲೆ ದಿಂಬಿನ ಕೆಳಗೆ ತುಳಸಿ ಎಳೆಯನ್ನು ಇಟ್ಟುಕೊಂಡು ಮಲಗುವುದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ.