Vastu Tips: ಈ ಮೂರು ವಸ್ತುಗಳನ್ನ ಅಪ್ಪಿತಪ್ಪಿಯೂ ಯಾರ ಮನೆಯಿಂದಲೂ ತರಬಾರದು!!
ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯು ಬಳಸುವ ವಸ್ತುಗಳು ಆತನ ಶಕ್ತಿಯ ಪರಿಣಾಮವನ್ನು ಹೊಂದಿರುತ್ತವೆ. ವಸ್ತುವಿನ ಮಾಲೀಕತ್ವವನ್ನ ಬದಲಾಯಿಸುವ ಮೂಲಕ ಅದರ ಶಕ್ತಿಯೂ ಬದಲಾಗುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಹೊಂದಿರುವ ಕೆಲವು ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರೊಬ್ಬರ ಮನೆಯಿಂದಲೂ ತರಬಾರದು.
ಒಂದು ವೇಳೆ ಈ ವಸ್ತುಗಳನ್ನು ಬೇರೆಯವರ ಮನೆಯಿಂದ ತಂದರೆ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಸಾಲು ಸಾಲು ಸಮಸ್ಯೆಗಳು ನಿಮ್ಮನ್ನು ಸುತ್ತುವರೆಯುತ್ತವೆ. ಸಾಲದ ಸಮಸ್ಯೆ ಮತ್ತು ಬಡತನ ನಿಮ್ಮನ್ನು ಇನ್ನಿಲ್ಲದಂತೆ ಕಾಡುತ್ತದೆ. ಬೇರೆಯವರ ಮನೆಯಿಂದ ಯಾವ ವಸ್ತುಗಳನ್ನು ತರಬಾರದು ಅನ್ನೋದರ ಬಗ್ಗೆ ತಿಳಿಯಿರಿ.
ಬೇರೆಯವರ ಮನೆಯಿಂದ ನೀವು ಯಾವುದೇ ಕಾರಣಕ್ಕೂ ಪೀಠೋಪಕರಣಗಳನ್ನು ತರಬಾರದು. ಏಕೆಂದರೆ ಇವುಗಳ ಜೊತೆಗೆ ನಕಾರಾತ್ಮಕ ಶಕ್ತಿಯೂ ಮನೆಗೆ ಬಂದು ವಾಸ್ತು ದೋಷ ಉಂಟುಮಾಡುತ್ತದೆ. ಹಳೆಯ ಪೀಠೋಪಕರಣ ತರುವ ಮೂಲಕ ನೀವು ಬಡತನವನ್ನು ಆಹ್ವಾನಿಸಿಕೊಳ್ಳುತ್ತಿರಿ. ಇದು ಸಂತೋಷದ ಕುಟುಂಬವನ್ನು ಹಾಳುಮಾಡುತ್ತದೆ.
ಅನೇಕ ಬಾರಿ ನಾವು ಯಾರ ಮನೆಗೆ ಹೋದರೂ ಇತರರ ಚಪ್ಪಲಿಗಳನ್ನು ಧರಿಸುತ್ತೇವೆ. ಆದರೆ ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಋಣಾತ್ಮಕ ಶಕ್ತಿಯು ದೇಹದಿಂದ ಹೊರಬರುವ ಮೊದಲ ಸ್ಥಳವೆಂದರೆ ಪಾದಗಳಂತೆ. ಹೀಗಾಗಿ ನೀವು ಇತರರ ಬೂಟು ಮತ್ತು ಚಪ್ಪಲಿಗಳನ್ನು ಧರಿಸಿದಾಗ ನಕಾರಾತ್ಮಕತೆಯು ನಿಮ್ಮೊಳಗೆ ಪ್ರವೇಶಿಸುತ್ತದೆ. ಇದು ಮುಂದೆ ನಿಮಗೆ ದೊಡ್ಡ ತೊಂದರೆಯನ್ನುಂಟು ಮಾಡುತ್ತದೆ.
ಬೇರೆಯವರ ಮನೆಯಿಂದ ಕೊಡೆ ಅಥವಾ ಛತ್ರಿಯನ್ನು ಬೇರೆಯವರ ಮನೆಯಿಂದ ತರುವುದು ಶುಭವಲ್ಲ. ಹೀಗೆ ಮಾಡುವುದರಿಂದ ಗ್ರಹಗಳ ಸ್ಥಾನ ಹದಗೆಡುತ್ತದೆ. ಕಾರಣಾಂತರಗಳಿಂದ ಬೇರೆಯವರ ಮನೆಯಿಂದ ಕೊಡೆ ತರಬೇಕಾದ ಸಂದರ್ಭ ಬಂದರೂ ಮನೆಯೊಳಗೆ ತಂದು ಉಪಯೋಗಿಸಿದ ನಂತರ ಅದನ್ನು ಹಿಂತಿರುಗಿಸಬೇಡಿ.