Vastu Tips: ಮನೆಯ ಮುಖ್ಯ ದ್ವಾರದ ಬಳಿ ಅಪ್ಪಿತಪ್ಪಿಯೂ ಇಂತಹ ವಸ್ತುಗಳನ್ನು ಇಡಲೇಬಾರದು

Thu, 29 Sep 2022-2:15 pm,

ಕಸ: ಮನೆಯ ಮುಖ್ಯ ದ್ವಾರದ ಬಳಿ ಎಂದಿಗೂ ಸಹ ಕಸ ಹಾಕಬಾರದು. ಇದರಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಬರುತ್ತದೆ. ಮಾತ್ರವಲ್ಲ, ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಸಹ ಇದರಿಂದ ಕೋಪಗೊಳ್ಳುತ್ತಾಳೆ. ಇದರಿಂದಾಗಿ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಶೂ, ಚಪ್ಪಲಿ ಇತ್ಯಾದಿ : ಶೂ ಮತ್ತು ಚಪ್ಪಲಿಗಳನ್ನು ಮನೆಯ ಮುಖ್ಯ ಗೇಟಿನ ಹೊರಗೆ ಅಥವಾ ಹತ್ತಿರ ಇಡಬಾರದು. ತಾಯಿ ಲಕ್ಷ್ಮಿಯು ಮುಖ್ಯ ದ್ವಾರದ ಮೂಲಕವೇ ಮನೆಯನ್ನು ಪ್ರವೇಶಿಸುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಎದುರಿಗೆ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಕಂಡಾಗತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದರಿಂದ ಮನೆಯಲ್ಲಿ ಹಣದ ನಷ್ಟವಾಗಬಹುದು ಎನ್ನಲಾಗುವುದು.

ಮನಿ ಪ್ಲಾಂಟ್: ಅನೇಕ ಜನರು ಮುಖ್ಯ ದ್ವಾರದ ಹೊರಗೆ ಮನಿ ಪ್ಲಾಂಟ್ ನೆಡುತ್ತಾರೆ. ಆದರೆ ವಾಸ್ತು ಪ್ರಕಾರ ಹೀಗೆ ಮಾಡುವುದು ಸರಿಯಲ್ಲ. ಮನಿ ಪ್ಲಾಂಟ್ ಅನ್ನು ಸಂಪತ್ತಿನ ಸಸ್ಯವೆಂದು ಪರಿಗಣಿಸಲಾಗುತ್ತದೆ. ಮನೆಯ ಹೊರಗೆ ನೆಟ್ಟರೆ ಎಲ್ಲರ ಕಣ್ಣು ಅದರ ಮೇಲೆ ಬೀಳುತ್ತದೆ. ಇದರಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಡುತ್ತದೆ. 

ಪೊರಕೆ: ವಾಸ್ತುವಿನಲ್ಲಿ ಪೊರಕೆಯನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅದನ್ನು ಎಂದಿಗೂ ಬಾಗಿಲಿನ ಬಳಿ ಇಡಬಾರದು. ಏಕೆಂದರೆ ಹೀಗೆ ಮಾಡುವುದರಿಂದ ನೀವು ಆಕಸ್ಮಿಕವಾಗಿ ಪೊರಕೆಯನ್ನು ತುಳಿಯಬಹುದು. ಇದರ ಹೊರತಾಗಿ ಯಾರೂ ಪೊರಕೆಯತ್ತ ನೋಡಬಾರದು. ಆದ್ದರಿಂದ,, ಪೊರಕೆಯನ್ನು ಎಂದಿಗೂ ಮುಖ್ಯ ದ್ವಾರದ ಬಳಿ ಇಡಬೇಡಿ. ಬದಲಿಗೆ ಅದನ್ನು ಯಾರಿಗೂ ಕಾಣದ ಜಾಗದಲ್ಲಿ ಇಡಿ.

ವಿದ್ಯುತ್ ತಂತಿಗಳು ಅಥವಾ ಕಂಬಗಳು: ಮನೆಯ ಮುಖ್ಯ ಬಾಗಿಲಿನ ಮುಂದೆ ವಿದ್ಯುತ್ ತಂತಿಗಳು ಅಥವಾ ಕಂಬಗಳು ಇರಬಾರದು. ಇದು ಕೆಟ್ಟ ಪರಿಣಾಮ ಬೀರುತ್ತದೆ. ವಿದ್ಯುತ್ ತಂತಿ, ಕಂಬಗಳು ಬಿದ್ದಿರುವುದರಿಂದ ಮನೆಯಲ್ಲಿ ಮಹಿಳೆಯರು ಮಕ್ಕಳಿಗೆ ತೊಂದರೆ ಆಗುತ್ತದೆ. ಮಾತ್ರವಲ್ಲ, ಇದು ಮನೆಯ ಆರ್ಥಿಕ ಸ್ಥಿತಿಯ ಮೇಲೂ ಸಹ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link